-->
ಮರ್ಯಾದೆ ಬಿಟ್ಟ ರಾಜಕಾರಣಿಗಳ ಬಗ್ಗೆ RSS ಕೆಂಡಾಮಂಡಲ: ಪ್ರತಿಪಕ್ಷಗಳ ವಿರುದ್ಧ ದ್ವೇಷ ಭಾಷಣದ ಬಗ್ಗೆ ಮೋಹನ್ ಭಾಗ್ವತ್‌ ಕಿಡಿ

ಜೂನ್, 2024ರಲ್ಲಿ ಮುಕ್ತಾಯವಾದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಬಳಕೆಯಾದ ಕೀಳು ಮಟ್ಟದ ಪದ ಬಳಕೆ, ದ್ವೇಷ ಭಾಷಣ ಹಾಗೂ ರಾಜಕಾರಣಿಗಳ ಹದ್ದುಮೀರಿದ ವರ್ತನೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್‌ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಜವಾದ ಸೇವಕ ಅಹಂಕಾರಿಯಾಗಲು ಸಾಧ್ಯವಿಲ್ಲ ಹಾಗೂ ಇತರರಿಗೆ ನೋವು ಮಾಡದೆ ತನ್ನ ಕರ್ತವ್ಯ ನಿಭಾಯಿಸುತ್ತಾನೆ ಎಂದು ಮೋಹನ ಭಾಗ್ವತ್ ಹೇಳಿದ್ದಾರೆ.

ರಾಜ್ಯದ ಈಶಾನ್ಯ ಭಾಗದಲ್ಲಿ ಇರುವ ಮಣಿಪುರದ ಸಮಸ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಈ ಸಮಸ್ಯೆಗೆ ಅತಿ ಆದ್ಯತೆಯ ಮೇರೆಗೆ ಸ್ಪಂದಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಮರ್ಯಾದೆಯಲ್ಲಿ ಇದ್ದು ಉತ್ತಮ ನಡತೆಯಿಂದ ನಡೆದುಕೊಳ್ಳುವವನೇ ವಾಸ್ತವವಾಗಿ ಸೇವಕ ಎಂದು ಕರೆಸಿಕೊಳ್ಳುತ್ತಾನೆ ಎಂದು ಮಾರ್ಮಿಕವಾಗಿ ರಾಜಕಾರಣಿಗಳ ಇತ್ತೀಚಿನ ನಡವಳಿಕೆ ಬಗ್ಗೆ ಕೆಂಡಕಾರಿದರು.

Ads on article

Advertise in articles 1

advertising articles 2

Advertise under the article