
ಕನ್ನಡದಲ್ಲಿ ಬೋರ್ಡ್ ಇಲ್ಲದಿದ್ದರೆ ಟ್ರೇಡ್ ಲೈಸನ್ಸ್ ರದ್ದು: ಮಂಗಳೂರು ಮಹಾನಗರ ಪಾಲಿಕೆ
Sunday, June 9, 2024
ಕನ್ನಡದಲ್ಲಿ ಬೋರ್ಡ್ ಇಲ್ಲದಿದ್ದರೆ ಟ್ರೇಡ್ ಲೈಸನ್ಸ್ ರದ್ದು: ಮಂಗಳೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಮದಾರರು ತಮ್ಮ ಉದ್ದಿಮೆ ಮಳಿಗೆ ನಾಮ ಫಲಕಗಳನ್ನು ಕನ್ನಡದಲ್ಲಿ ಅಳವಡಿಸದೇ ಇದ್ದರೆ ಅಂತಹ ಮಳಿಗೆಗಳ ಟ್ರೇಡ್ ಲೈಸನ್ಸ್ ರದ್ದುಗೊಳಿಸುವುದಾಗಿ ಪಾಲಿಕೆ ತಿಳಿಸಿದೆ.
ಕನ್ನಡಕ್ಕೆ ಪ್ರಾಮುಖ್ಯತೆ ಕೊಟ್ಟು, ನಾಮಫಲಕ(ಬೋರ್ಡ್)ದ ಶೇ. 60ರಷ್ಟು ಭಾಗವನ್ನು ಕನ್ನಡದಲ್ಲೇ ಬರೆದಿರಬೇಕು. ಈ ಷರತ್ತಿಗೆ ಅನುಗುಣವಾಗಿ ಲೈಸನ್ಸ್ ನೀಡಲಾಗುವುದು. ಈ ನಿಟ್ಟಿನಲ್ಲಿ ಲೈಸನ್ಸ್ ರಿನೀವಲ್ ಅಥವಾ ಹೊಸ ಲೈಸನ್ಸ್‌ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ನಾಮಫಲಕಗಳನ್ನು ಪರಿಶೀಲಿಸುತ್ತಾರೆ.
ಕೆಲವು ಉದ್ದಿಮೆದಾರರು ನಾಮಫಲಕಗಳ ನಿಯಮವನ್ನು ಉಲ್ಲಂಘಿಸಿ ಕೇವಲ ಇಂಗ್ಲಿಷ್‌ನಲ್ಲಿ ನಾಮಫಲಕ ಅಳವಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಈ ಪ್ರಕಟಣೆಯನ್ನು ಹೊರಡಿಸಿದೆ.