Puttur: ಗುಜರಿ ಹೆಕ್ಕುವ ನೆಪದಲ್ಲಿ ಕಳ್ಳರು ಬರ್ತಾರೆ ಜಾಗ್ರತೆ! ಪುತ್ತೂರಿನಲ್ಲಿ ಕಳ್ಳರ ಹಾವಳಿ
Puttur: ಗುಜರಿ ಹೆಕ್ಕುವ ನೆಪದಲ್ಲಿ ಕಳ್ಳರು ಬರ್ತಾರೆ ಜಾಗ್ರತೆ! ಪುತ್ತೂರಿನಲ್ಲಿ ಕಳ್ಳರ ಹಾವಳಿ
ಗುಜರಿ ವಸ್ತು ಖರೀದಿಸುವ ನೆಪದಲ್ಲಿ ಬಂದ ಅಪರಿಚಿತರ ತಂಡವೊಂದು ಮನೆಯಲ್ಲಿ ಇದ್ದವರ ಗಮನಕ್ಕೆ ಬಾರದ ರೀತಿಯಲ್ಲಿ ಪಂಪ್ ಸೆಟ್ ಸಹಿತ ಕೃಷಿ ಉಪಕರಣಗಳನ್ನು ಕಳವು ಮಾಡಿದ ಘಟನೆ ಪುತ್ತೂರು ತಾಲೂಕಿನ ಸರ್ವೇ ಗ್ರಾಮದಲ್ಲಿ ನಡೆದಿದೆ.
ಸೊರಕೆ ನಿವಾಸಿ ಅಬ್ಬಾಸ್ ಎಂಬವರ ಮನೆಗೆ ರಿಕ್ಷಾವೊಂದರಲ್ಲಿ ಬಂದಿದ್ದ ಮೂವರು ಗುಜರಿ ಸಾಮಾನು ಇದೆಯೇ ಎಂದು ಕೇಳಿದ್ದರು. ಮನೆಯವರು ಇಲ್ಲ ಎಂದು ಹೇಳಿದ್ದರು. ಆ ನಂತರವೂ ಬಂದಿದ್ದ ಮೂವರಲ್ಲಿ ಇಬ್ಬರು ಗುಜರಿ ವಸ್ತುಗಳನ್ನು ಹೆಕ್ಕುವ ನೆಪದಲ್ಲಿ ಮನೆಯ ವಠಾರದಲ್ಲಿ ಸುತ್ತಾಡಿದ್ದರು.
ಒಬ್ಬ ಮನೆಯ ಬಳಿಯೇ ನಿಂತಿದ್ದ. ಕೆಲ ಹೊತ್ತಿನ ಬಳಿಕ ಮೂವರು ಅಲ್ಲಿಂದ ತೆರಳಿದ್ದರು. ನಂತರ ಮನೆಯವರು ನೋಡಿದಾಗ ಮನೆಯ ಮುಂಭಾಗದಲ್ಲಿ ಪಂಪ್ ಸೆಟ್ ಕಾಣೆಯಾಗಿತ್ತು.
ಹೊಸ ಮನೆಯ ಪಕ್ಕದಲ್ಲಿಯೇ ಅಬ್ಬಾಸ್ ಅವರ ಹಳೆ ಮನೆ ಇದ್ದು, ಅಲ್ಲಿ ಹೋಗಿ ನೋಡಿದಾಗ ಹಾರೆ, ಪಿಕ್ಕಾಸು, ಬಕೆಟ್ ಕಾಣೆಯಾಗಿತ್ತು. ಸೊರಕೆಯ ಉಮ್ಮರ್ ಎಂಬವರ ಮನೆಯಲ್ಲಿ ಹಳೆ ಫ್ರಿಡ್ಜ್ ಒಳಭಾಗದಲ್ಲಿ ಇಟ್ಟಿದ್ದ ಕೆಲವು ವಸ್ತುಗಳನ್ನೂ ಕಳ್ಳರು ಕದ್ದೊಯ್ದಿದ್ದರು.
ಘಟನೆಯ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.