ಮೋದಿ ವಿರುದ್ಧ ಸ್ಪರ್ಧಿಸಲಿರುವ ಆ ಕಮೀಡಿಯನ್ ಯಾರು..?
ಮೋದಿ ವಿರುದ್ಧ ಸ್ಪರ್ಧಿಸಲಿರುವ ಆ ಕಮೀಡಿಯನ್ ಯಾರು..?
ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಲೋಕಸಭೆಗೆ ಸ್ಪರ್ಧೆ ನಡೆಸಲಿದ್ದಾರೆ. ಅವರ ವಿರುದ್ಧ ಪ್ರಧಾನಿ ಮೋದಿಯವರನ್ನೇ ಅನುಕರಿಸುವ ಮೂಲಕ ಖ್ಯಾತಿ ಗಳಿಸಿದ ಕಮೀಡಿಯನ್ ಸ್ಪರ್ಧೆ ನಡೆಸಲಿದ್ದಾರೆ.
ಅವರು ಯಾರೆಂದರೆ, The Great Indian Laughter Challengeನಂತಹ ಜನಪ್ರಿಯ ದೂರದರ್ಶನ ಕಾರ್ಯಕ್ರಮದಲ್ಲಿ ಮಿಂಚಿರುವ ಕಮೀಡಿಯನ್ ಶ್ಯಾಮ್ ರಂಗೀಲಾ.
ಶ್ಯಾಮ್ ರಂಗೀಲಾ ಮೂಲತಃ ರಾಜಸ್ತಾನದವರು. 29 ವರ್ಷ ವಯಸ್ಸಿನ ಶ್ಯಾಮ್ ರಂಗೀಲಾ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಧಾನಿ ವಿರುದ್ಧ ಸ್ಪರ್ಧೆ ನಡೆಸಲು ಈಗಾಗಲೇ ತಯಾರಿ ನಡೆಸಿದ್ದಾರೆ.
ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯಲು ತಾವು ಪ್ರಧಾನಿ ವಿರುದ್ಧ ಸ್ಪರ್ಧಿಸುವುದಾಗಿ ಕಮೀಡಿಯನ್ ರಂಗೀಲಾ ಹೇಳಿದ್ದಾರೆ.
2017ರಲ್ಲಿ ಪ್ರಧಾನಿ ಮೋದಿಯವರ ಧ್ವನಿಯನ್ನು ಮಿಮಿಕ್ರಿ ಮಾಡುವ ಮೂಲಕ ಶ್ಯಾಮ್ ರಂಗೀಲಾ ಭಾರೀ ಜನಪ್ರಿಯತೆಯನ್ನು ಪಡೆದಿದ್ದರು. ಅವರ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿವೆ.