ಮಂಗಳೂರು: ಮಾವು ಮತ್ತು ಹಲಸು ಮೇಳ: ಆಸಕ್ತ ಕೃಷಿಕರಿಂದ ಅರ್ಜಿ ಆಹ್ವಾನ
ಮಂಗಳೂರು: ಮಾವು ಮತ್ತು ಹಲಸು ಮೇಳ: ಆಸಕ್ತ
ಕೃಷಿಕರಿಂದ ಅರ್ಜಿ ಆಹ್ವಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರಿಂದ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಶೀರ್ಷಿಕೆ ಅಡಿ ಮಾವು ಮತ್ತು ಹಲಸು ಮೇಳವನ್ನು ಮೇ ತಿಂಗಳ 5 ರಿಂದ 13 ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.
ರೈತ ಬಾಂಧವರು ತಾವು
ಬೆಳೆದ ಮಾವು ಮತ್ತು ಹಲಸು ಮೇಳದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ
ಕಲ್ಪಿಸಲಾಗಿದೆ. ಈ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಸ್ವ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಮಂಗಳೂರಿನ
ಕೊಟ್ಟಾರದಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಇರುವ ತೋಟಗಾರಿಕೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಆಸಕ್ತ ಕೃಷಿಕರು ತೋಟಗಾರಿಕೆ ಇಲಾಖೆಯ ಇ-ಮೇಲ್ ವಿಳಾಸ: ddhdk@yahoo.com ಮೂಲಕ ಮೇ 7ರಂದು ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲಾಖೆಯ ಫೋನ್ ನಂಬರ್: 0824-2423628 ಅನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.