
ಸಂಸ್ಕೃತ ಭಾಷೆ ಆಯ್ಕೆ ಮಾಡಿದ್ದ ಮುಸ್ಲಿಂ ವಿದ್ಯಾರ್ಥಿನಿ ಸಾಧನೆ: SSLCಯಲ್ಲಿ 590 ಅಂಕ
ಸಂಸ್ಕೃತ ಭಾಷೆ ಆಯ್ಕೆ ಮಾಡಿದ್ದ ಮುಸ್ಲಿಂ ವಿದ್ಯಾರ್ಥಿನಿ ಸಾಧನೆ: SSLCಯಲ್ಲಿ 590 ಅಂಕ
2023-24ನೇ ಸಾಲಿನ SSLC ಪರೀಕ್ಷೆಯಲ್ಲಿ ಚಿಕ್ಕಮಗಳೂರಿನ ಮುಸ್ಲಿಮ್ ವಿದ್ಯಾರ್ಥಿನಿ ರಾಜ್ಯವೇ ಹೆಮ್ಮೆ ಪಡುವ ಸಾಧನೆ ಮಾಡಿದ್ಧಾರೆ.
ಚಿಕ್ಕಮಗಳೂರು ಬಸರಿಕಟ್ಟೆ ಶ್ರಿ ಸದ್ಗುರು ವಿದ್ಯಾಮಂದಿರದ ವಿದ್ಯಾರ್ಥಿನಿ ಫಾತಿಮತ್ ಸಮೀಹಾ ಸಂಸ್ಕೃತ ಭಾಷೆ ಆಯ್ಕೆ ಮಾಡಿಕೊಂಡು ಬರೋಬ್ಬರಿ 590 ಅಂಕಗಳನ್ನು ಗಳಿಸಿ ಹೆಮ್ಮೆ ತಂದಿದ್ದಾರೆ.
ಫಾತಿಮತ್ ಪ್ರಥಮ ಭಾಷೆಯಾಗಿ ಆರಿಸಿಕೊಂಡದ್ದು ಸಂಸ್ಕೃತವನ್ನು. ಈ ವಿಷಯದಲ್ಲಿ ಫಾತಿಮತ್ ಸಮೀಹಾ 125ರಲ್ಲಿ 125 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಉಳಿದಂತೆ, ಕನ್ನಡ ಭಾಷಾ ವಿಷಯದಲ್ಲಿ 99, ಇಂಗ್ಲಿಷ್‌ನಲ್ಲಿ 94, ಗಣಿತದಲ್ಲಿ 83, ವಿಜ್ಞಾನದಲ್ಲಿ 69, ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ. ಹೀಗೆ, ಒಟ್ಟು 625 ಅಂಕಗಳಲ್ಲಿ 590 ಅಂಕದೊಂದಿಗೆ ಶೇ. 94.4% ರಷ್ಟು ಫಲಿತಾಂಶ ಗಳಿಸಿದ್ದಾರೆ.
ಫಾತಿಮತ್ ಸಮೀಹಾ ಅವರು ಚಿಕ್ಕಮಗಳೂರಿನ ಮಹಮ್ಮದ್ ರಫೀಕ್ ಮತ್ತು ಸೆಲೀಖತ್ ಬೇಗಂ ಪಾಣೆಮಂಗಳೂರು ದಂಪತಿಯ ಮಗಳು.