ಬೇಸಿಗೆ ರಜೆ ಕಡಿತ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ನಡುಕ!- ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಸೂಚನೆ
ಬೇಸಿಗೆ ರಜೆ ಕಡಿತ ಮಾಡಿದ ಶಿಕ್ಷಣ ಸಂಸ್ಥೆಗಳಿಗೆ ನಡುಕ!- ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಸೂಚನೆ
ಬೇಸಿಗೆ ರಜೆಯನ್ನು ಕಡಿತ ಮಾಡಿ ಶಾಲೆಗಳನ್ನು ಆರಂಭಿಸಿದ ರಾಜ್ಯದ ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಚಾಟಿ ಬೀಸಿದೆ. ರಜೆ ಅವಧಿಯನ್ನು ಕಡಿತಗೊಳಿಸಿದ ಕ್ರಮ ಸರಿಯಲ್ಲ ಎಂದು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ವಾರ್ನಿಂಗ್ ನೀಡಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳನ್ನು ನಿಗದಿಯಂತೆಯೇ ಮೇ 29ರಿಂದಲೇ ಆರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯ ಪಠ್ಯ ಕ್ರಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಎಪ್ರಿಲ್ 11ರಿಂದ ಮೇ 28ರ ವರೆಗೆ ಬೇಸಿಗೆ ರಜೆ ಘೋಷಿಸಲಾಗಿತ್ತು. ಆದರೆ, ಕೆಲವು ಶಾಲೆಗಳು ರಜೆ ಕಡಿತಗೊಳಿಸಿದ್ದವು.
ರಾಜ್ಯದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನಿಗದಿಯಂತೆಯೇ ಶೈಕ್ಷಣಿಕ ರಜೆ ಮುಂದುವರಿಸುವಂತೆ ಕೋರಿಕೆ ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಶಿಕ್ಷಣ ಇಲಾಖೆಯ ಆಯುಕ್ತರು ಈ ನಿರ್ದೇಶನವನ್ನು ಹೊರಡಿಸಿದ್ದಾರೆ.
ನಿಗದಿಯಂತೆಯೇ ಶಾಲೆಗಳನ್ನು ಆರಂಭಿಸುವಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.