ಪೇಟಿಎಂ ವಾರ್ಷಿಕ 1422 ಕೋಟಿ ನಷ್ಟ; ತ್ರೈಮಾಸಿಕದಲ್ಲೂ 550 ಕೋಟಿ ರೂ. ನಷ್ಟ
ಪೇಟಿಎಂ ವಾರ್ಷಿಕ 1422 ಕೋಟಿ ನಷ್ಟ; ತ್ರೈಮಾಸಿಕದಲ್ಲೂ 550 ಕೋಟಿ ರೂ. ನಷ್ಟ
ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯೂನಿಕೇಷನ್ 2023-24ನೇ ಹಣಕಾಸು ವರ್ಷದ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ 550 ಕೋಟಿ ರೂಪಾಯಿ ನಿವ್ವಳ ನಷ್ಟ ಅನುಭವಿಸಿದೆ.
2022-23ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಸಂಸ್ಥೆ 167 ಕೋಟಿ ರೂ. ನಷ್ಟ ಅನುಭವಿಸಿತ್ತು. ಸಂಸ್ಥೆಯ ವರಮಾನದಲ್ಲಿ ಶೇ. 3ರಷ್ಟು ಇಳಿಕೆ ಕಂಡಿದ್ದು, ಆದಾಯದಲ್ಲಿ 2267 ಕೋಟಿ ರೂ. ಇಳಿಕೆಯಾಗಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳಿವೆ.
ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದೆ. ಹಾಗಾಗಿ, ಬ್ಯಾಂಕ್‌ನಿಂದ ನೀಡುವ ಪೇಟಿಎಂ ವ್ಯಾಲೆಟ್ ಮತ್ತು ಫಾಸ್ಟ್ಯಾಗ್ ಸೇವೆ ಸ್ಥಗಿತಗೊಂಡಿದೆ.
ಈ ಕಾರಣದಿಂದ ಕಂಪೆನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ ಸುಮಾರು 500 ರೂ. ಮೊತ್ತದ ಮೇಲೆ ಪರಿಣಾಮ ಬೀರಿದೆ. ಇದರಿಂದ ಲಾಭದಲ್ಲಿ ಬಾರೀ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.
2023-24ರ ಆರ್ಥಿಕ ವರ್ಷದಲ್ಲಿ ಸಂಸ್ಥೆ 1422 ಕೋಟಿ ರೂ. ನಿವ್ವಳ ನಷ್ಟ ದಾಖಲಿಸಿದೆ. ವರಮಾನದಲ್ಲಿ ಶೇ. 25ರಷ್ಟು ಏರಿಕೆಯಾದರೂ ನಷ್ಟ ಸಂಭವಿಸಿದ್ದು ಸಂಸ್ಥೆಯನ್ನು ಚಿಂತೆಗೀಡು ಮಾಡಿದೆ.