ಇಲ್ಲಿಯವರೆಗೆ ಅಭಿವೃದ್ಧಿಯ ಟ್ರೇಲರ್ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೇ: ನರೇಂದ್ರ ಮೋದಿ
Sunday, March 31, 2024
ಇಲ್ಲಿಯವರೆಗೆ ಅಭಿವೃದ್ಧಿಯ ಟ್ರೇಲರ್ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೇ: ನರೇಂದ್ರ ಮೋದಿ
ದೇಶದ ಜನರು ಇಲ್ಲಿಯವರೆಗೆ ಅಭಿವೃದ್ದಿಯ ಟ್ರೈಲರ್ ಅಷ್ಟೇ ನೋಡಿದ್ದಾರೆ. ಮಾಡುವುದು ಇನ್ನೂ ಬಹಳಷ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣೆ ಘೋಷಣೆ ಆದ ಬಳಿಕ ಉತ್ತರ ಪ್ರದೇಶದ ಮೀರಠ್‌ನಲ್ಲಿ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಐದು ವರ್ಷಗಳ ನೀಲನಕ್ಷೆಯನ್ನು ಸರ್ಕಾರ ರೂಪಿಸುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಮೂರನೇ ಅವಧಿಗೆ ಈಗಾಗಲೇ ತಯಾರಿ ಆರಮಭಿಸಿದೆ. ಆರಂಭದ 100 ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಲಬೇಕು ಎಂಬ ಸಿದ್ಧತೆ ಮಾಡಿಯಾಗಿದೆ ಎಂದು ಅವರು ಹೇಳಿದರು.