ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರನ್ನೇ ತಪಾಸಣೆ ನಡೆಸಿದ ಚುನಾವಣಾ ಸಿಬ್ಬಂದಿ: ಕಾರಲ್ಲಿ ಸಿಕ್ಕಿದ ಹಣವೆಷ್ಟು ಗೊತ್ತೇ..?
Sunday, March 31, 2024
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರನ್ನೇ ತಪಾಸಣೆ ನಡೆಸಿದ ಚುನಾವಣಾ ಸಿಬ್ಬಂದಿ: ಕಾರಲ್ಲಿ ಸಿಕ್ಕಿದ ಹಣವೆಷ್ಟು ಗೊತ್ತೇ..?
ಚುನಾವಣೆ ಎಂದರೆ ಹಣ ಮತ್ತು ಹೆಂಡದ ಹೊಳೆಯೇ ಹರಿಯುತ್ತದೆ. ಗಿಫ್ಟ್‌ಗಳಿಗೂ ಲೆಕ್ಕವಿಲ್ಲ. ಅಕ್ರಮ ಹಣ ಸಾಗಾಟದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರನ್ನೂ ಚುನಾವಣಾ ಆಯೋಗದ ಸಿಬ್ಬಂದಿ ಬಿಡಲಿಲ್ಲ. ಸಿಎಂ ಕಾರನ್ನೇ ತಪಾಸಣೆ ನಡೆಸುವ ಮೂಲಕ ಅವರು ಕರ್ತವ್ಯಪರತೆಯನ್ನು ಮೆರೆದರು.
ಆ ಕಾರಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿರಬಹುದು ಎಂಬ ನಿಮ್ಮ ಊಹೆಯಾಗಿದ್ದರೆ ಅದು ತಪ್ಪು. ಅವರ ಕಾರಿನಲ್ಲಿ ಯಾವುದೇ ಹಣವೂ ಆಯೋಗದ ಅಧಿಕಾರಿಗಳಿಗೆ ಸಿಕ್ಕಿಲ್ಲ.
ಸಿಎಂ ಸಿದ್ದರಾಮಯ್ಯ ಶಾಸಕ ಕೆ.ವೈ. ನಂಜೇಗೌಡ ಅವರ ತಮ್ಮನ ಮಗಳ ವಿವಾಹ ಕಾರ್ಯದಲ್ಲಿ ಪಾಲ್ಗೊಳ್ಳು ಕೋಲಾರಕ್ಕೆ ಭೇಟಿ ನೀಡಿದ ವೇಳೆ ಕಾರಿನ ತಪಾಸಣೆ ನಡೆಯಿತು.