ಏರ್ ಇಂಡಿಯಾ 18 ಗಂಟೆ ಲೇಟ್!- ಸೌದಿ, ದಮಾಮ್‌ನಿಂದ ಬರಬೇಕಿದ್ದ ವಿಮಾನ ಸಿಬ್ಬಂದಿ ವಿರುದ್ಧ ಪ್ರಯಾಣಿಕರ ಆಕ್ರೋಶ
Thursday, March 7, 2024
ಏರ್ ಇಂಡಿಯಾ 18 ಗಂಟೆ ಲೇಟ್!- ಸೌದಿ, ದಮಾಮ್‌ನಿಂದ ಬರಬೇಕಿದ್ದ ವಿಮಾನ ಸಿಬ್ಬಂದಿ ವಿರುದ್ಧ ಪ್ರಯಾಣಿಕರ ಆಕ್ರೋಶ
ಸೌದಿ ಅರೇಬಿಯಾದ ದಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 18 ಗಂಟೆಯಾದರೂ ಪ್ರಯಾಣ ಆರಂಭಿಸಲಿಲ್ಲ
ಇದರಿಂದ ಕೆರಳಿದ ಪ್ರಯಾಣಿಕರು ವಿಮಾನ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಿಗ್ಗೆ 10-20ಕ್ಕೆ ವಿಮಾನ ಟೇಕ್ ಆಫ್ ಆಗಬೇಕಿತ್ತು. ಗುರುವಾರ ಸಂಜೆಯಾದರೂ ವಿಮಾನ ನಿಲ್ದಾಣ ಕದಲಲಿಲ್ಲ. ಈ ವಿಳಂಬದ ಬಗ್ಗೆ ವಿಮಾನ ಸಿಬ್ಬಂದಿ ತಮ್ಮ ಪ್ರಯಾಣಿಕರಿಗೆ ಯಾವುದೇ ಮಾಹಿತಿಯನ್ನೂ ನೀಡಲಿಲ್ಲ.