-->

ಶಿವಮೊಗ್ಗದಲ್ಲಿ ಗೀತಾ, ವಯನಾಡಿನಲ್ಲಿ ಮತ್ತೊಮ್ಮೆ ರಾಹುಲ್!: ಲೋಕ ಚುನಾವಣೆಗೆ ಕೈ ಪಟ್ಟಿ ಬಿಡುಗಡೆ

ಶಿವಮೊಗ್ಗದಲ್ಲಿ ಗೀತಾ, ವಯನಾಡಿನಲ್ಲಿ ಮತ್ತೊಮ್ಮೆ ರಾಹುಲ್!: ಲೋಕ ಚುನಾವಣೆಗೆ ಕೈ ಪಟ್ಟಿ ಬಿಡುಗಡೆ

ಶಿವಮೊಗ್ಗದಲ್ಲಿ ಗೀತಾ, ವಯನಾಡಿನಲ್ಲಿ ಮತ್ತೊಮ್ಮೆ ರಾಹುಲ್!: ಲೋಕ ಚುನಾವಣೆಗೆ ಕೈ ಪಟ್ಟಿ ಬಿಡುಗಡೆ


ಲೋಕಸಭಾ ಚುನಾವಣೆಗೆ ಕೈ ಪಟ್ಟಿ ಬಿಡುಗಡೆ ಮಾಡಿದೆ. ಹಿರಿಯ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ ಮತ್ತೊಮ್ಮೆ ಮತದಾರರ ಪರೀಕ್ಷೆಗೆ ಒಳಗಾಗಲಿದ್ದಾರೆ.ಶಿವಮೊಗ್ಗದಲ್ಲಿ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಯಡಿಯೂರಪ್ಪ ಪುತ್ರನನ್ನು ಎದುರಿಸಲಿದ್ದಾರೆ.


ಮಂಡ್ಯದಲ್ಲಿ ಉದ್ಯಮಿ ಸ್ಟಾರ್ ಚಂದ್ರು ಅವರನ್ನು ಕೈ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.


ಮಾಜಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಅವರು ಛತ್ತೀಸ್‌ಗಢದ ರಂಜನ್ ಗಾವ್‌ನಿಂದ ಕಣಕ್ಕಿಳಿಯಲಿದ್ದಾರೆ.


ಜೆಡಿಎಸ್ ಪ್ರಾಬಲ್ಯ ಇರುವ ಹಾಸನದಲ್ಲಿ ಎಂ. ಶ್ರೇಯಸ್ ಪಟೇಲ್, ತುಮಕೂರಿನಿಂದ ಎಸ್.ಪಿ. ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.


ರಾಜ್ಯದ ಏಕೈಕ ಕೈ ಸಂಸದ ಡಿ.ಕೆ. ಸುರೇಶ್ ಅವರಿಗೆ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆಗೆ ಅವಕಾಶ ನೀಡಲಾಗಿದೆ.


ಮೇಘಾಲಯದಿಂದ ಸಾಲೆಂಗ್ ಎ. ಸಂಗ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಆಳಪ್ಪುಳದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌ ಸ್ಪರ್ಧೆ ನಡೆಸಲಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99