
ಅಡಿಕೆ ರೈತರಿಗೆ ಶಾಕಿಂಗ್ ನ್ಯೂಸ್: ಕೇಂದ್ರದ ಈ ನಿರ್ಧಾರದಿಂದ ಬೆಲೆ ಕುಸಿತದ ಭೀತಿ..!
ಅಡಿಕೆ ರೈತರಿಗೆ ಶಾಕಿಂಗ್ ನ್ಯೂಸ್: ಕೇಂದ್ರದ ಈ ನಿರ್ಧಾರದಿಂದ ಬೆಲೆ ಕುಸಿತದ ಭೀತಿ..!
ಅಡಿಕೆ ಬೆಳೆಗಾರರಿಗೆ ಒಂದು ಶಾಕಿಂಗ್ ನ್ಯೂಸ್. ಕೇಂದ್ರ ಸರ್ಕಾರದ ಅಡಿಕೆ ಆಮದಿಗೆ ಅವಕಾಶ ನೀಡಿದೆ. ಈ ನಿರ್ಧಾರದಿಂದ ಅಡಿಕೆ ಬೆಳೆಯ ಬೆಲೆ ಕುಸಿತದ ಭೀತಿ ಎದುರಾಗಿದೆ.
ಈ ನಿರ್ಧಾರದಿಂದಾಗಿ ನೆರೆ ಹೊರೆಯ ದೇಶಗಳು ಭಾರತಕ್ಕೆ ಅಡಿಕೆ ಕಳುಹಿಸಲು ಮುಂದಾಗಿದ್ದಾರೆ. ಶ್ರೀಲಂಕಾದಿಂದ 5 ಲಕ್ಷ ಟನ್ ಅಡಿಕೆ ರಫ್ತು ಮಾಡಲು ಅಲ್ಲಿನ ಕಂಪೆನಿಯೊಂದು ಸಿದ್ಧತೆ ನಡೆಸಿದೆ.
ಬ್ರಿಟನ್ ಮೂಲದ ಎಸ್‌ರಾಮ್ ಆಂಡ್ ಎಮ್‌ರಾಮ್ ಗ್ರೂಪ್ ಜೊತೆಗೆ ಕಂಪೆನಿಯೊಂದು ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದಾರೆ.
ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈ. ಲಿ. ಜೊತೆಗೆ ಅಡಿಕೆ ಆಮದು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
2022ರ ಎಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರೂ. ಮೌಲ್ಯದ ಅಡಿಕೆ ಆಮದು ಮಾಡಿಕೊಂಡಿತ್ತು. 2023ರ ಎಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಆಮದು ಪ್ರಮಾಣ 4.04 ಕೋಟಿ ರೂ. ಗೆ ಕುಸಿದಿತ್ತು.
ಇದೀಗ ಲಂಕಾದಿಂದ ಭಾರೀ ಪ್ರಮಾಣದ ಆಮದಿಗೆ ಬ್ರಿಟನ್ ಕಂಪೆನಿ ಮುಂದಾಗಿರುವುದು ಸಹಜವಾಗಿ ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡಿದೆ.
ದೇಶದಲ್ಲಿ ಅಡಿಕೆಗೆ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ದೇಶದ ಹಲವು ಸಂಪ್ರದಾಯ ಮತ್ತು ಸಮಾರಂಭಗಳಲ್ಲಿ ಅಡಿಕೆಯನ್ನು ಬಳಸಲಾಗುತ್ತದೆ.
ಇಂಡೋನೇಷ್ಯಾ, ಬಾಂಗ್ಲದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಿಕೆ ಆಮದು ಮಾಡಿಕೊಳ್ಳುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ 351 ರೂ.ಗೆ ಕಡಿಮೆ ಇಲ್ಲದ ಅಡಿಕೆ ಆಮದಿಗೆ ಮಾತ್ರ ಅವಕಾಶ ಇದೆ ಎಂದು ವಿದೇಶ ವ್ಯಾಪಾರ ಇಲಾಖೆಯ ಮಹಾನಿರ್ದೇಶನಾಲಯ ತಿಳಿಸಿದೆ.