
PHD ವಿದ್ಯಾರ್ಥಿನಿ ಚೈತ್ರ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಮುಸ್ಲಿಂ ಯುವಕನ ಕೈವಾಡದ ಶಂಕೆ?
PHD ವಿದ್ಯಾರ್ಥಿನಿ ಚೈತ್ರ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಮುಸ್ಲಿಂ ಯುವಕನ ಕೈವಾಡದ ಶಂಕೆ?
ಮಂಗಳೂರಿನ PHD ವಿದ್ಯಾರ್ಥಿನಿ ಚೈತ್ರ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರುಖ್ ಶೇಕ್ ಎಂಬಾತನ ಜೊತೆ ಆಕೆ ತೆರಳಿರುವ ಅನುಮಾನಗಳು ದಟ್ಟವಾಗಿದೆ.
MSc ಪೂರೈಸಿದ ಚೈತ್ರ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯೂನಿವರ್ಸಿಟಿಯಲ್ಲಿ PHD ಮಾಡುತ್ತಿದ್ದರು. ಕೋಟೆಕಾರು ಬಳಿಯ ಮಾಡೂರಿನಲ್ಲಿ PG ಒಂದರಲ್ಲಿ ಯುವತಿಗೆ ಮುಸ್ಲಿಂ ಯುವಕನ ಜೊತೆ ಸ್ನೇಹ ಉಂಟಾಯಿತು ಎನ್ನಲಾಗಿದೆ.
ಫೆಬ್ರವರಿ 17ರಂದು ತನ್ನ ಸ್ಕೂಟರಿನಲ್ಲಿ ಹೋದ ಆಕೆ ಮರಳಿ ಬಂದಿರಲಿಲ್ಲ. ಈಕೆಯ ತಂದೆ ತೀರಿಕೊಂಡಿದ್ದರಿಂದ ಮಂಗಳೂರಿನಲ್ಲಿ ನೆಲೆಸಿದ್ದ ದೊಡ್ಡಪ್ಪ ಅವರೇ ಈಕೆಗೆ ಶಿಕ್ಷಣ ಕೊಡಿಸುತ್ತಿದ್ದರು ಯುವತಿ ನಾಪತ್ತೆ ವಿಷಯ ತಿಳಿದು ಮರುದಿನ ಉಳ್ಳಾಲ ಠಾಣೆಗೆ ಅವರು ದೂರು ನೀಡಿದ್ದರು.
ಶಾರುಖ್ ಶೇಕ್ ಬಂಟ್ವಾಳದ ನೇರಳಕಟ್ಟೆ ನಿವಾಸಿಯಾಗಿದ್ದು, ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಈ ಹಿಂದೆ ಸೌದಿ ಅರೇಬಿಯಾ ಕತಾರ್‌ನಲ್ಲಿ ಕೆಲಸಕ್ಕೆ ಆನಂತರ ಊರಿನಲ್ಲಿ ನೆಲೆಸಿದ್ದ ಕತಾರ್ ನಲ್ಲಿ ಇದ್ದಾಗ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನಲಾಗಿದೆ.
ಚೈತ್ರ ಪುತ್ತೂರು ಮೂಲದ ಯುವತಿಯಾಗಿದ್ದು, ಮಂಗಳೂರಿನಲ್ಲಿಯೇ ಶಿಕ್ಷಣ ಪೂರೈಸಿದ್ದಳು. ಇದೀಗ ಶಾರುಖ್ ಶೇಕ್ ಪ್ರೇಮದ ಬಲೆಗೆ ಬಿದ್ದು ಆಕೆ ಆತನ ಜೊತೆಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಚೈತ್ರ ಅವರ ಸ್ಕೂಟರ್ ಎರಡು ದಿನಗಳ ಹಿಂದೆ ಸುರತ್ಕಲ್ ಬಳಿ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಕೆಯ ಬ್ಯಾಂಕ್ ಖಾತೆಯಿಂದ ಸುರತ್ಕಲ್‌ನಲ್ಲಿ ಎಟಿಎಂ ಮೂಲಕ ಎರಡು ಲಕ್ಷ ರೂಪಾಯಿ ಹಣ ಡ್ರಾ ಮಾಡಲಾಗಿದೆ. ಈ ಮಾಹಿತಿಯನ್ನು ಕಲೆ ಹಾಕಿರುವ ಪೊಲೀಸರು, ಸದ್ಯ ಆಕೆಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ಇವರು ಬೆಂಗಳೂರಿಗೆ ಪರಾರಿಯಾಗಿರಬಹುದು ಎಂದು ಹೇಳಲಾಗಿದೆ.
ಚೈತ್ರ ಅವರಿಗೆ ಪಿ ಎಚ್ ಡಿ ಫಿಲೋಶಿಪ್ ಮೂಲಕ ತಿಂಗಳಿಗೆ 40,000 ಬರುತ್ತಿತ್ತು. ಹೀಗಾಗಿ ಈ ಹಣವನ್ನು ಈಕೆ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದರು. ಶಾರುಖ್ ಶೇಖ್ ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಆಕೆಯ ದುಡ್ಡನ್ನೇ ಪಡೆದು ಖರ್ಚು ಮಾಡುತ್ತಿದ್ದಾರೆ ಎಂಬ ಶಂಕೆ ಇದೆ.