![Trade License: ಉದ್ದಿಮೆ ಪರವಾನಿಗೆ: ಮಂಗಳೂರು ಪಾಲಿಕೆಯ ಮಹತ್ವದ ಪ್ರಕಟಣೆ ಇಲ್ಲಿದೆ Trade License: ಉದ್ದಿಮೆ ಪರವಾನಿಗೆ: ಮಂಗಳೂರು ಪಾಲಿಕೆಯ ಮಹತ್ವದ ಪ್ರಕಟಣೆ ಇಲ್ಲಿದೆ](https://i.ytimg.com/vi/JL4r97jd6AQ/hqdefault.jpg)
Trade License: ಉದ್ದಿಮೆ ಪರವಾನಿಗೆ: ಮಂಗಳೂರು ಪಾಲಿಕೆಯ ಮಹತ್ವದ ಪ್ರಕಟಣೆ ಇಲ್ಲಿದೆ
Trade License: ಉದ್ದಿಮೆ ಪರವಾನಿಗೆ: ಮಂಗಳೂರು ಪಾಲಿಕೆಯ ಮಹತ್ವದ ಪ್ರಕಟಣೆ ಇಲ್ಲಿದೆ
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು. ಉದ್ದಿಮೆ ಪರವರಿಗೆ ನವೀಕರಣ ಪ್ರಕ್ರಿಯೆ ಫೆಬ್ರವರಿ 19 ರಿಂದ ಆರಂಭಗೊಂಡಿದೆ.
ಆನ್ಲೈನ್ ತಂತ್ರಾಂಶದ ಮೂಲಕ ಹೊಸ ಮತ್ತು ನವೀಕರಣ ಅರ್ಜಿ ಸಲ್ಲಿಸಬಹುದು ಎಂದು ಮಹಾನಗರ ಪಾಲಿಕೆಯ ಪ್ರಕಟಣೆ ಇಳಿಸಿದೆ
2024 25 ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಮಾಡಿದ ನಂತರ ಉದ್ದಿಮೆ ಪರವಾನಗಿ ಮಾಡಲು ಉದ್ಯಮಿಗಳಿಗೆ ಅವಕಾಶ ನೀಡಲಾಗುತ್ತದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಪಡೆದುಕೊಂಡಿರುವ ಪರವಾನಿಗೆ ಶುಲ್ಕವನ್ನು ಏಪ್ರಿಲ್ 30ರೊಳಗೆ ನವೀಕರಿಸಬಹುದು.
ಆ ಬಳಿಕ, ಪ್ರತಿ ಮೂರು ತಿಂಗಳಿಗೊಮ್ಮೆ ಶೇಕಡ 25ರಷ್ಟು ದಂಡ ವಿಧಿಸಲಾಗುತ್ತದೆ.
ಈ ಬಗ್ಗೆ ಯಾವುದೇ ಗೊಂದಲ ಇದ್ದರೆ, ಅಥವಾ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 636401658 ಅನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.