-->

 ನಳಿನ್, ಶೋಭಾ ಸ್ಪರ್ಧೆಗೆ ಬಿಜೆಪಿಯಲ್ಲೇ ವಿರೋಧ- ಕಮಲ ಪಾಳಯದಲ್ಲಿ ಬಂಡಾಯದ ಭೀತಿ?

ನಳಿನ್, ಶೋಭಾ ಸ್ಪರ್ಧೆಗೆ ಬಿಜೆಪಿಯಲ್ಲೇ ವಿರೋಧ- ಕಮಲ ಪಾಳಯದಲ್ಲಿ ಬಂಡಾಯದ ಭೀತಿ?

ನಳಿನ್, ಶೋಭಾ ಸ್ಪರ್ಧೆಗೆ ಬಿಜೆಪಿಯಲ್ಲೇ ವಿರೋಧ- ಕಮಲ ಪಾಳಯದಲ್ಲಿ ಬಂಡಾಯದ ಭೀತಿ?





ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಕರಾವಳಿ ಬಿಜೆಪಿಗೆ ತಲೆನೋವು ಶುರುವಾಗಿದೆ.

ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸ್ಪರ್ಧೆಗೆ ವ್ಯಾಪಕ ವಿರೋಧ ದಿನೇದಿನೇ ವ್ಯಕ್ತವಾಗುತ್ತಿದೆ. ಈ ಬಾರಿ ಬಂಡಾಯದ ಸುಳಿವು ದೊರಕಿದೆ. ಸುರತ್ಕಲ್ ಪ್ರಭಾವಿ ನಾಯಕ ಸತ್ಯಜಿತ್ ಸುರತ್ಕಲ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೇಳಿದ್ದಾರೆ.


ಮಂಗಳೂರಿನಲ್ಲಿ ಬೃಹತ್ "ಜನಾಗ್ರಹ ಸಮಾವೇಶ" ನಡೆಸಿದ ಸತ್ಯಜಿತ್ ಸುರತ್ಕಲ್ ಅಭಿಮಾನಿಗಳ ಬಳಗ, ತಮ್ಮ ನಾಯಕನಿಗೆ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಬಿಜೆಪಿಯನ್ನು ಆಗ್ರಹಿಸಿದೆ.


ಬಂಟ್ವಾಳದ ತುಂಬೆ ಗ್ರಾಮದಲ್ಲಿರುವ ಬಂಟರ ಭವನದಲ್ಲಿ ನಡೆದ ಈ ಬೃಹತ್ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಒಕ್ಕರಲ ಆಗ್ರಹವನ್ನು ಮಾಡಿದ್ದಾರೆ.


ಎಂಟು ವರ್ಷದ ಹಿಂದೆ ಹೋಂ ಸ್ಟೇ ದಾಳಿ ನಡೆದ ಸಂದರ್ಭದಲ್ಲಿ ನಮ್ಮವರೇ ನಮ್ಮ ವಿರುದ್ಧ ನಿಂತರು. ಅದರಿಂದಾಗಿ ತಿಂಗಳ ಕಾಲ ಜೈಲಿನಲ್ಲಿ ಕೂರುವಂತಾಯಿತು. ರಾಜಕೀಯ ಅಧಿಕಾರದಲ್ಲಿ ಇದ್ದವರು ನನ್ನ ಪರವಾಗಿ ನಿಲ್ಲದೆ ಇದ್ದುದರಿಂದ ಕಾರ್ಯಕರ್ತರು, ನೀವು ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿದರು.


ಆಗ ಸಂಘದ ಹಿರಿಯರಲ್ಲಿ ರಾಜಕೀಯದ ಅವಕಾಶ ಕೇಳಿದಾಗ ಪಕ್ಷದಲ್ಲಿ ಕೆಲಸ ಮಾಡುವಂತೆ ಹೇಳಿದರು. ಆದರೆ ಯಾವುದೋ ಪಕ್ಷದಲ್ಲಿದ್ದ ವ್ಯಕ್ತಿಗೆ ಶಾಸಕ ಸ್ಥಾನಮಾನ ನೀಡಿದ್ದು ಅತೀವ ನೋವು ತಂದುಕೊಟ್ಟಿತು ಎಂದು 2018ರ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ವಿಚಾರವನ್ನು ಸತ್ಯಜಿತ್ ಕಾರ್ಯಕರ್ತರಲ್ಲಿ ಹೇಳಿಕೊಂಡರು.


ಹಿಂದುತ್ವಕ್ಕಾಗಿ ದುಡಿದಿದ್ದೇನೆ, ಶಾಸಕ ಸ್ಥಾನದ ಅವಕಾಶ ಕೊಡಿ ಎಂದು ಕೇಳಿದಾಗ, ಹಿಂದುತ್ವ ಒಂದೇ ಮಾನದಂಡ ಅಲ್ಲ ಎಂದು ಹೇಳಿ ರಾಜಕೀಯದ ಅವಕಾಶವನ್ನು ನಿರಾಕರಿಸಿದರು. ಬಳಿಕ ಯಡಿಯೂರಪ್ಪ ಅವರೇ ಸೂಕ್ತ ಸ್ಥಾನ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು, ಅವರು ತಮ್ಮ ಮಾತು ಮರೆತರು. ನಂತರ ಕೆಲವರು ಸತ್ಯನನ್ನು ಮುಗಿಸಿದೆವು ಎಂದು ಹೇಳಿಕೊಂಡು ತಿರುಗಾಡಿದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.


ಹಿಂದುತ್ವ ಬಲವಾಗಿದೆ ಮೋದಿ ಅಲೆ ಇದೆ ಎಂದು ಹೇಳಿ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವುದಿಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಅವರು ನನಗೆ ಸೂಕ್ತ ರಾಜಕೀಯ ಸ್ಥಾನಮಾನದ ಅವಕಾಶ ಕೊಡುವ ಭರವಸೆ ನೀಡಿದ್ದಾರೆ. ಈ ಬಾರಿಯಾದರೂ ನನಗೆ ಸ್ಪರ್ಧಿಸಲು ಅವಕಾಶ ನೀಡಿ ಎಂದು ವಿನಂತಿಸಿದರು.


"ಶೋಭಾ ಗೋ ಬ್ಯಾಕ್" ಅಭಿಯಾನ

ಇನ್ನೊಂದೆಡೆ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ.


ಸ್ಥಳೀಯ ಜನರಿಗೆ ಪಕ್ಷದ ಕಾರ್ಯಕರ್ತರಿಗೆ ದೂರವಾಗಿರುವ ಸಂಸದರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಉತ್ತಮ ರಾಜಕೀಯ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಶೋಭಾ ಕರಂದ್ಲಾಜೆ ಅಭಿಯಾನವನ್ನು ನಡೆಸಿದ್ದಾರೆ.


ಈ ಬೆಳವಣಿಗೆಗಳು ಕರಾವಳಿಯಲ್ಲಿ ಬಿಜೆಪಿ ನಾಯಕತ್ವವನ್ನು ಕಂಗಡಿಸಿದೆ. ಹಿಂದುತ್ವದ ಭದ್ರ ಕೋಟೆಯಾಗಿರುವ ಕರಾವಳಿಯಲ್ಲಿ ಈ ಬೆಳವಣಿಗೆಗಳು ಕೇಸರಿ ಪಾಳಯದಲ್ಲಿ ಸಣ್ಣ ನಡುಕವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99