ನಗರಾಭಿವೃದ್ಧಿ ಕಚೇರಿಯಲ್ಲಿ ಪ್ರತಿ ಟೇಬಲ್‌ನಲ್ಲೂ ತಿಮಿಂಗಿಲಗಳು!- ಕಡತ ವಿಲೇವಾರಿಗೆ ಸೆಂಟ್ಸ್ ಲೆಕ್ಕದಲ್ಲಿ ಲಂಚ ನಿಗದಿ?
ನಗರಾಭಿವೃದ್ಧಿ ಕಚೇರಿಯಲ್ಲಿ ಪ್ರತಿ ಟೇಬಲ್‌ನಲ್ಲೂ ತಿಮಿಂಗಿಲಗಳು!- ಕಡತ ವಿಲೇವಾರಿಗೆ ಸೆಂಟ್ಸ್ ಲೆಕ್ಕದಲ್ಲಿ ಲಂಚ ನಿಗದಿ?
ಮಂಗಳೂರಿನ ನಗರಾಭಿವೃದ್ಧಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಏಕ ವಿನ್ಯಾಸ ನಿವೇಶನಕ್ಕೆ ಅರ್ಜಿ ಹಾಲು ಕಚೇರಿಗೆ ಭೇಟಿ ನೀಡಿದರೆ ಭ್ರಷ್ಟಾಚಾರದ ಶನಿ ನಿಮಗೆ ಅಂಟಿಕೊಂಡಿತು ಎಂದೇ ಅರ್ಥ.
ಫೈಲಿಂಗ್ ಮಾಡುವ ಮುನ್ನ ದಾಖಲೆ ಪರಿಶೀಲನೆ ಮಾಡುವುದರಿಂದಲೇ ಕೈ ಬಿಸಿ ಮಾಡದಿದ್ದರೆ ಕಿರಿಕಿರಿ ಆರಂಭವಾಗುತ್ತದೆ.
ನಂತರ, ಮೂಡದ ಸರ್ವೇಯರ್ ಸರ್ವೇ ಕಾರ್ಯ ಕೈಗೆತ್ತಿಕೊಳ್ಳಲು ಕೂಡ ಮೀನ ಮೇಷ ಎಣಿಸಬೇಕಾಗುತ್ತದೆ. ಇಲ್ಲಿಂದ ಸೆಂಟ್ಸ್ ಲೆಕ್ಕಾಚಾರದಲ್ಲಿ ಹಣ ಕೇಳುವ ತಿಮಿಂಗಿಲಗಳು ಬಾಯ್ದೆರೆದು ಕಾಯುತ್ತವೆ.
ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಫೈಲ್ ಹೋಗಬೇಕಾದರೆ ಕಚೇರಿ ಸಿಬ್ಬಂದಿ ಅರ್ಜಿದಾರರ ಕೈಯಲ್ಲಿ ಇರುವ ಹಣವನ್ನೇ ದಿಟ್ಟಿಸಿ ನೋಡುತ್ತಾನೆ. ಹಣ ಕೊಡದಿದ್ದರೆ ಅಲೆದಾಡಿಸುವುದು, ವಿಳಂಬ ಮಾಡುವುದು, ನಿರ್ಲಕ್ಷ್ಯ ತೋರುವುದು ಅವರ ಜನ್ಮ ಸಿದ್ದ ಹಕ್ಕು ಎಂಬಂತಾಗಿದೆ.
ಕಡತದ ಮೂವ್‌ಮೆಂಟ್‌ನಲ್ಲಿ ಯಾವುದೇ ಒಂದು ಟೇಬಲ್‌ಗೆ ಹಣ ಕಡಿಮೆ ಕೊಟ್ಟರಂತೂ ಅನಗತ್ಯ ಕಿರುಕುಳ, ಇನ್ನಿಲ್ಲದ ಆಕ್ಷೇಪಗಳು ಮತ್ತು ಹಿಂಬರಹ ಮತ್ತು ಅರ್ಜಿ ತಿರಸ್ಕೃತ ಮಾಡುವ ಮೂಲಕ ಅರ್ಜಿದಾರರಿಗೆ ತೊಂದರೆ ನೀಡಲಾಗುತ್ತದೆ.
ಯಾವುದೇ ಏಜೆಂಟ್‌ಗಳಿಗೆ, ಬ್ರೋಕರ್‌ಗಳಿಗೆ ಅವಕಾಶ ಇಲ್ಲ ಎಂಬ ಬೋರ್ಡ್ ಇದ್ದರೂ ಇಲ್ಲಿ ಬ್ರೋಕರ್‌ಗಳದ್ದೇ ರಾಜ್ಯಭಾರ.
ಕೆಲಸ ಮಾಡಿದ ನಂತರ ಖುಷಿಯಿಂದ ಕೊಡುವ ಹಣವಾದರೆ ಪರವಾಗಿಲ್ಲ. ಆದರೆ, ಸೆಂಟ್ಸ್ ಲೆಕ್ಕದಲ್ಲಿ ಲಂಚ ಪಡೆದವರು ಬಡವರು ಕಷ್ಟಪಟ್ಟು ದುಡಿದ ಹಣವನ್ನು ದೋಚಿ ಉದ್ದಾರ ಆಗಬಹುದೇ..? ನೊಂದವರ ಕಣ್ಣೀರ ಶಾಪದಿಂದ ಲಂಚದ ಹಣ ಪಡೆದುಕೊಂಡವರು ಉದ್ದಾರ ಆಗುವುದಿಲ್ಲ ಎಂಬುದಾಗಿ ಅರ್ಜಿದಾರರು ನೊಂದ ಮನಸ್ಸಿನಲ್ಲಿ ನುಡಿಯುತ್ತಾರೆ.