ಹೀಗೆ ಮಾಡಿದರೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇರದು: ಹೊಸ ಸೂತ್ರ ನೀಡಿದ ಮಂಗಳೂರು ವೈದ್ಯ
ಹೀಗೆ ಮಾಡಿದರೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇರದು: ಹೊಸ ಸೂತ್ರ ನೀಡಿದ ಮಂಗಳೂರು ವೈದ್ಯ
ಮನುಷ್ಯನಿಗೆ ಬದುಕಲು ಆಹಾರ ಮುಖ್ಯ. ಆದರೆ, ಆಹಾರವೇ ಬದುಕು ಆಗಬಾರದು. ಈಗಿನ ನವೋದ್ಯಮ ಕಾಲದಲ್ಲಿ ಆಹಾರವು ಉದ್ಯಮ, ವ್ಯಾಪಾರ, ರಾಜಕೀಯ, ಶರೀರದ ಪೋಷಣೆ ಎಲ್ಲವೂ ಆಗಿದೆ ಎಂದು ಮಂಗಳೂರಿನ ಪ್ರಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.
ಆಹಾವು ಲಸಿಕೆ ಎಂಬ ವಿಷಯದ ಕುರಿತು ಮಂಗಳೂರಿನಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಕಕ್ಕಿಲ್ಲಾಯ, ಈಗಿನ ಆಹಾರ ಪದ್ಧತಿಗಳು ಮನುಷ್ಯನಿಗೆ ಆಧುನಿಕ ರೋಗಗಳಿಗೆ ಕಾರಣವಾಗುತ್ತಿವೆ ಎಂದು ಹೇಳಿದರು.
ಕಕ್ಕಿಲ್ಲಾಯ ಟಿಪ್ಸ್!
ಈ ಐದು ವಸ್ತುಗಳನ್ನು ತ್ಯಜಿಸಿದರೆ ಮನುಷ್ಯ ಆರೋಗ್ಯದಿಂದ ಇರುತ್ತಾನೆ ಎಂದು ಹೇಳಿದರು.
ಯಾವುದು ಈ ಐದು ಆಹಾರ ವಸ್ತುಗಳು..
1) ಸಕ್ಕರೆ ಮಿಶ್ರಿತ ತಿಂಡಿ ತಿನಿಸುಗಳು
2) ಹಾಲು ಮತ್ತು ಅದರ ಉತ್ಪನ್ನಗಳು
3) ಎಣ್ಣೆಯಲ್ಲಿ ಕರಿದ ಪದಾರ್ಥಗಳು
4) ಸಂಸ್ಕರಿಸಿದ ಧಾನ್ಯಗಳು
ಹಾಗಾದರೆ, ಯಾವ ಆಹಾರ ಕ್ರಮಗಳು ಮನುಷ್ಯನಿಗೆ ಉತ್ತಮ...
ಮೀನು,
ಮಾಂಸ,
ಮೊಟ್ಟೆ,
ತರಕಾರಿಗಳನ್ನು
ಹೆಚ್ಚು ಪ್ರಮಾಣದಲ್ಲಿ ತಿನ್ನಬೇಕು.
ಆಹಾರವನ್ನು ರಾಜಕೀಯ ಶಕ್ತಿಗಳು, ಔಷಧ ಕಂಪೆನಿಗಳು ಮತ್ತು ಧಾರ್ಮಿಕ ಸಿದ್ಧಾಂತಗಳು ನಿಯಂತ್ರಿಸುತ್ತದೆ. ನಾವು ಅವುಗಳನ್ನು ಪ್ರಶ್ನಿಸುವಂತಾಗಬೇಕು ಎಂದು ಅವರು ಹೇಳಿದರು.