ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮನೆಗೆ ಲೋಕಾ ದಾಳಿ: ಅಪಾರ ಪ್ರಮಾಣದ ಸೊತ್ತು ವಶಕ್ಕೆ
Wednesday, January 31, 2024
ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮನೆಗೆ ಲೋಕಾ ದಾಳಿ: ಅಪಾರ ಪ್ರಮಾಣದ ಸೊತ್ತು ವಶಕ್ಕೆ
ಮಂಗಳೂರಿನ ಮೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈಗ ಸದ್ಯಕ್ಕೆ ಮಂಗಳೂರಿನಲ್ಲಿ ವಾಸವಾಗಿರುವ ತುಮಕೂರು ಮೂಲದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶಾಂತ ಕುಮಾರ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಮನೆಯಿಂದ 33 ಲಕ್ಷ ರೂ. ನಗದು, ಬಾಂಡ್ ಹಾಗೂ ಇತರ ದಾಖಲೆಗಳು ಲಭಿಸಿವೆ ಎನ್ನಲಾಗಿದೆ.
ಪತ್ನಿಯ ಖಾತೆಗೆ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿರುವ ಅಂಶಗಳು ದಾಳಿಯ ಸಂದರ್ಭದಲ್ಲಿ ಪತ್ತೆಯಾಗಿದೆ.
ಶಾಂತ ಕುಮಾರ್ ಅವರು ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು.