-->

ಕ್ಲಪ್ತ ಸಮಯಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು..! ಸುಳ್ಯ ಶಾಸಕಿಗೆ ಪಾಠ ಮಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಕ್ಲಪ್ತ ಸಮಯಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು..! ಸುಳ್ಯ ಶಾಸಕಿಗೆ ಪಾಠ ಮಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಕ್ಲಪ್ತ ಸಮಯಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕು..! ಸುಳ್ಯ ಶಾಸಕಿಗೆ ಪಾಠ ಮಾಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್





ತನ್ನ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲೇ‌ ಸರಿಯಾದ ಸಮಯಕ್ಕೆ ಆಗಮಿಸದ ಸುಳ್ಯದ ಶಾಸಕಿ ಭಾಗೀರಥಿ ಮರುಳ್ಯ ಅವರಿಗೆ ಸಮಯ ಪಾಲನೆಯ ನೀತಿಪಾಠವನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕವಾಗಿ ಮಾಡಿದ್ದಾರೆ.


ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಜನರ ಸಮಸ್ಯೆ ಆಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಾಸಕಿ ಮರುಳ್ಯ ಅವರಿಗೆ ಪಾಠ ಮಾಡಿದ್ದಲ್ಲದೆ, ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಿದ ಬಗ್ಗೆ ಸಮರ್ಥನೆಯನ್ನೂ ನೀಡಿದರು.


ತಮ್ಮ ಆಗಮನಕ್ಕೂ ಮುನ್ನವೇ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದ್ದಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಸಮಾಧಾನ ವ್ಯಕ್ತಪಡಿದ್ದರು.


ಘಟನೆಯ ವಿವರ:

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಬೆಳಿಗ್ಗೆ ಸರಿಯಾಗಿ 11 ಗಂಟೆಯ ವೇಳೆ ಕೆವಿಜಿ ಪುರಭವನಕ್ಕೆ ಆಗಮಿಸಿ ನಿಗದಿಯಂತೆ ಜನತಾದರ್ಶನ ಕಾರ್ಯಕ್ರಮ ಆರಂಭಿಸಿದರು. ಆದರೆ, ಸ್ಥಳೀಯ ಸುಳ್ಯ ಶಾಸಕರು ಮಾತ್ರ ಆ ಸಂದರ್ಭದಲ್ಲಿ ಆಗಮಿಸಿರಲಿಲ್ಲ. ಪುತ್ತೂರು ಉಪ ವಿಭಾಗಾಧಿಕಾರಿ ಸ್ವಾಗತ ಮಾಡುತ್ತಿದ್ದ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ ಎ.ಸಿ. ಸಮ್ಮುಖದಲ್ಲೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.


ನಾನು ಶಾಸಕಿ ಈ ಕ್ಷೇತ್ರದ ಅಲ್ವಾ? ನಾನು ಬರುವವರೆಗೆ ಕಾಯಬಹುದಿತ್ತಲ್ವಾ? ಬಾಳಿಲದಲ್ಲಿ ನಾನು ಕಾಯುತ್ತಿದ್ದೆ. ನನಗೆ ಸರಿಯಾದ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಲ್ಲಿ ಆಸೀನರಾದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ತಾನು ಈ ಕ್ಷೇತ್ರದ ಶಾಸಕಿ. ಮಾತ್ರವಲ್ಲದೆ ಓರ್ವ ಮಹಿಳೆ. ಈ ಕಾರಣಕ್ಕಾದರೂ ಸ್ವಲ್ಪ ಹೊತ್ತು ಕಾಯಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.


ಆ ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕಿಯವರು ಒಂದು ವಿಷಯವನ್ನು ಗಮನದಲ್ಲಿಡಬೇಕು. ನಾವು ಸರಿಯಾದ ಸಮಯಕ್ಕೆ ಜನತಾದರ್ಶನ ಆರಂಭಿಸಬೇಕೆಂದು ಬೆಳಗಿನ ಉಪಹಾರವನ್ನು ಮಂಗಳೂರಿನಲ್ಲಿ ಮಾಡದೆ ಇಲ್ಲಿಗೆ ಬಂದಿದ್ದೇವೆ. ದಾರಿಯಲ್ಲಿ ಒಂದೆರಡು ಕಡೆ ನಿಲ್ಲಿಸಿದಾಗಲೂ ಉಸ್ತುವಾರಿ ಸಚಿವರು ಜನರನ್ನು ಕಾಯಿಸಬಾರದು. ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಬೇಕೆಂದು ಬಂದಿದ್ದೇವೆ ಎಂಬುದನ್ನು ನೆನಪಿಸಿ ಸಮಯಪ್ರಜ್ಞೆ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.


ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರವರೂ, ತನ್ನ ಭಾಷಣದ ಕೊನೆಗೆ ಈ ಬಗ್ಗೆ ಪ್ರಸ್ತಾಪಿಸಿ, ಶಾಸಕರಿಗೆ ಏನೋ ಗೊಂದಲವಾಗಿದೆ. ನಾವೇನು ಗೊಂದಲ ಮಾಡಿಲ್ಲ. ಜನರನ್ನು ತುಂಬಾ ಸಮಯ ಕಾಯಿಸಬಾರದು, ಸರಿಯಾದ ಸಮಯಕ್ಕೆ ಕಾರ್ಯಕ್ರಮ ಆರಂಭಿಸಬೇಕೆಂಬ ಕಾರಣಕ್ಕೆ ಬಂದು ಕಾರ್ಯಕ್ರಮ ಆರಂಭಿಸಿದ್ದೇವೆ. ಎಲ್ಲರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಆಗಬೇಕಾಗಿದೆ ಎಂದು ಹೇಳಿದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99