
ಶಾಸಕರಿದ್ದರೂ ಸುಳ್ಯದಲ್ಲಿ ಅಶೋಕ್ ರೈ ಅವರೇ ಜನಪ್ರಿಯ!- ಸ್ಥಳೀಯ ಶಾಸಕರನ್ನು ಕಡೆಗಣಿಸಿ ಪುತ್ತೂರು ಶಾಸಕರಿಗೆ ಅಹವಾಲು ಹೇಳಿದ ಜನತೆ
ಶಾಸಕರಿದ್ದರೂ ಸುಳ್ಯದಲ್ಲಿ ಅಶೋಕ್ ರೈ ಅವರೇ ಜನಪ್ರಿಯ!- ಸ್ಥಳೀಯ ಶಾಸಕರನ್ನು ಕಡೆಗಣಿಸಿ ಪುತ್ತೂರು ಶಾಸಕರಿಗೆ ಅಹವಾಲು ಹೇಳಿದ ಜನತೆ
ಸಾಮಾನ್ಯವಾಗಿ ಕ್ಷೇತ್ರದಲ್ಲಿ ಶಾಸಕರದ್ದೇ ದರ್ಬಾರು. ಆದರೆ, ಸುಳ್ಯದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರೇ ಜನಪ್ರಿಯ ಎಂಬುದು ಸುಳ್ಯದ ಅಹವಾಲು ಸ್ವೀಕಾರ ಸಮಾಂಭ ಸಾಕ್ಷಿಯಾಯಿತು.
ಮಾಮೂಲಿಯಾಗಿ ಜನರು ತಮ್ಮ ಕ್ಷೇತ್ರದ ಕುಂದುಕೊರತೆಯನ್ನು ಯಾ ನಾಗರಿಕ ಬವಣೆಯನ್ನು ಆಯಾ ಕ್ಷೇತ್ರದ ಶಾಸಕರಿಗೆ ಹೇಳುತ್ತಾರೆ. ಅವರ ಬಳಿಗೆ ಜನರು ತೆರಳಿ ತಮ್ಮ ಅಹವಾಲು ಸಲ್ಲಿಸುವುದು ಸಾಮಾನ್ಯ ಸಂಗತಿ.
ಇದಕ್ಕೆ ವ್ಯತಿರಿಕ್ತ ಎಂಬಂತೆ, ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಅವರಿಗಿಂತಲೂ ಹೆಚ್ಚು ಮಿಂಚಿದ್ದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ
ಹಲವು ಮಂದಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಳಿ ತಮ್ಮ ಅಹವಾಲು ಸಲ್ಲಿಸಿದ ವಿದ್ಯಮಾನ ನಡೆಯಿತು. ಇದರಿಂದ ಸ್ಥಳೀಯ ಶಾಸಕರು ಕೊಂಚ ಮುಜುಗರಕ್ಕೆ ಒಳಗಾದರು.
ಈ ಸಭೆಯಲ್ಲಿ ವಿವಿಧ ಇಲಾಖಾ ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.