ಕರಾವಳಿಯ ಕೆಲ ಶಿಕ್ಷಕರು ದಾರಿ ತಪ್ಪಿದ್ದಾರೆ, ಅವರನ್ನು ಸರಿದಾರಿಗೆ ತರುತ್ತೇವೆ- ಮಧು ಬಂಗಾರಪ್ಪ
ಕರಾವಳಿಯ ಕೆಲ ಶಿಕ್ಷಕರು ದಾರಿ ತಪ್ಪಿದ್ದಾರೆ, ಅವರನ್ನು ಸರಿದಾರಿಗೆ ತರುತ್ತೇವೆ- ಮಧು ಬಂಗಾರಪ್ಪ
ಕರಾವಳಿಯಲ್ಲಿ ಕೆಲವು ಶಿಕ್ಷಕರು ದಾರಿತಪ್ಪಿದ್ದಾರೆ. ನಿರ್ದಿಷ್ಟ ಪಕ್ಷವೊಂದರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾರ್ನಿಂಗ್ ನೀಡಿದ್ದಾರೆ.
ಶಿಕ್ಷಕರು ನಿಯತ್ತಾಗಿ ಪಾಠ ಮಾಡಬೇಕೇ ಹೊರತು ನಿರ್ದಿಷ್ಟ ಪಕ್ಷದ ಪರ ಕೆಲಸ ಮಾಡುವುದಲ್ಲ. ಇದನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕರ್ತವ್ಯದಲ್ಲಿ ಅಸಡ್ಡೆ ತೋರುವ ಶಿಕ್ಷಕರನ್ನು ಸರಿದಾರಿಗೆ ತರುತ್ತೇವೆ ಎಂದು ಅವರು ಹೇಳಿದರು.;
ಕೊಲ್ಲೂರಿನಲ್ಲಿ ಮಾತನಾಡಿದ ಅವರು ಭಾವನಾತ್ಮಕ ವಿಚಾರದಿಂದ ದೇಶ ಬೆಳವಣಿಗೆಯಾಗುವುದಿಲ್ಲ. ಶಿಕ್ಷಣದಿಂದ ಮಾತ್ರ ಬೆಳವಣಿಗೆ ಸಾಧ್ಯ. ಶಿಕ್ಷಕರು ಪಾಠ ಮಾತ್ರ ಮಾಡಬೇಕು. ಅವರನ್ನೆಲ್ಲ ಸರಿದಾರಿಗೆ ತರುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಎಂದು ಹೇಳಿದರು.
ಶಿಕ್ಷಕರು ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ.ಸೇವೆ ಏನಿದ್ದರೂ ಸರ್ಕಾರಕ್ಕೆ ಮಾತ್ರವೇ ಹೊರತು ಯಾವುದೇ ಪಕ್ಷಕ್ಕಲ್ಲ ಎಂದು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕರಾವಳಿಯ ಕೆಲವು ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದವೇಕು ಎಂಬ ಆದೇಶ ಜಾರಿಯಾಗುತ್ತಿಲ್ಲ. ಇದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಶಾಲೆಗೆ ಶಿಕ್ಷಣ ಇಲಾಖೆಯಿಂದ ನೋಟೀಸ್ ನೀಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.