ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಕಲ್ಕುಡ, ಕಲ್ಲುರ್ಟಿ ದೈವಗಳ ಆಶೀರ್ವಾದ
Tuesday, February 6, 2024
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಕಲ್ಕುಡ, ಕಲ್ಲುರ್ಟಿ ದೈವಗಳ ಆಶೀರ್ವಾದ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಸ್ಥಳೀಯ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹೊತ್ತಿದ್ದ ಹರಕೆ ಸೇವೆಯಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಭಾಗವಹಿಸಿದ್ದರು.
ಬಂಟ್ವಾಳ ತಾಲೂಕಿನ ಪಣೋಲಿಬೈಲಿನ ಕಲ್ಕುಡ, ಕಲ್ಲುರ್ಟಿ ದೈವಗಳ ರಾತ್ರಿ ಸೇವೆಯನ್ನು ಸಮರ್ಪಿಸಿದ ಖಾದರ್, ದೈವಗಳ ಆಶೀರ್ವಾದಕ್ಕೆ ಪಾತ್ರರಾದರು.
ಸ್ಥಳೀಯ ಶಾಸಕರೂ ಆಗಿದ್ದ ಖಾದರ್ ಚುನಾವಣೆಯಲ್ಲಿ ಗೆದ್ದರೆ ತುಳುನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿರುವ ಪಣೋಲಿಬೈಲಿನಲ್ಲಿ ಕಲ್ಕುಡ, ಕಲ್ಲುರ್ಟಿ ದೈವಗಳಿಗೆ ಕೋಲ ಸೇವೆ ಕೊಡುತ್ತೇನೆ ಎಂದು ಹರಕೆ ಹೊತ್ತಿದ್ದೆ. ಅದರಂತೆ ಈ ಹರಕೆ ಸೇವೆಯನ್ನು ಸಮರ್ಪಿಸಲಾಗಿದೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ತಿಳಿಸಿದರು.