ಚುನಾವಣಾ ಬಾಂಡ್‌ನ ಬೆಚ್ಚಿಬೀಳಿಸುವ ಹಿನ್ನೆಲೆ: ಸುಪ್ರೀಂಕೋರ್ಟ್ ತೀರ್ಪಿನಲ್ಲಿ ವಿಸ್ತೃತ ಮಾಹಿತಿ
ಚುನಾವಣಾ ಬಾಂಡ್‌ನ ಬೆಚ್ಚಿಬೀಳಿಸುವ ಹಿನ್ನೆಲೆ: ಸುಪ್ರೀಂಕೋರ್ಟ್ ತೀರ್ಪಿನಲ್ಲಿ ವಿಸ್ತೃತ ಮಾಹಿತಿ
ಕೇಂದ್ರದ ಆಡಳಿತಾರೂಢ ಪಕ್ಷಕ್ಕೆ ಸಿಂಹಪಾಲು ನೀಡುವ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ 2017ರಿಂದ ಭಾರತದ ವಿವಿಧ ರಾಜಕೀಯ ಪಕ್ಷಗಳು ಅನಾಮದೇಯ ದೇಣಿಗೆಗಳ ಮೂಲಕ ಎಷ್ಟು ಹಣವನ್ನು ಸಂಗ್ರಹಿಸಿವೆ ಎಂಬ ಅಂಕಿ ಅಂಶಗಳು ಬಯಲಾಗಿದೆ.
ಕಳೆದ ಆರು ವರ್ಷಗಳಲ್ಲಿ ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳು ಆಡಳಿತರೂಢ ಭಾರತೀಯ ಜನತಾ ಪಕ್ಷ ಬಿಜೆಪಿ ಅತಿ ಹೆಚ್ಚು ಅನಾಮಧೇಯ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಅಂಕಿ ಅಂಶ ಸಹಿತ ಮಾಹಿತಿ ನೀಡಿದೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಗ್ರಹಿಸಿದ ಅನಾಮಧೇಯ ದೇಣಿಗೆಗಳ ಒಟ್ಟು ಮೊತ್ತ 6566 ಕೋಟಿ ರೂಪಾಯಿ.
ಎರಡನೇ ಸ್ಥಾನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಕಾಂಗ್ರೆಸ್) ಇದೆ. ಇದು ಒಟ್ಟು ಸಂಗ್ರಹಿಸಿದ ಅನಾಮಧೇಯ ದೇಣಿಗೆಗಳ ಮೊತ್ತ 1,123 ಕೋಟಿ ರೂಪಾಯಿ.
ಮೂರನೇ ಸ್ಥಾನದಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಇದೆ. ಈ ಪಕ್ಷ 2018 ರಿಂದ ಇದುವರೆಗೆ 1092 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ.
ಅಚ್ಚರಿ ಎಂದರೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ ವಾದಿ (ಸಿಪಿಎಂ) ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಸ್ವೀಕರಿಸದ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ.
ನ್ಯಾ. ಸಂಜೀವ್ ಕನ್ನ ಅವರು ತಮ್ಮ ಪ್ರತ್ಯೇಕ ಆದರೆ ಸಹಮತದ ಅಭಿಪ್ರಾಯದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ದತ್ತಾಂಶವನ್ನು ಹೆಚ್ಚಾಗಿ ಅರ್ಜಿದಾರರು ಮತ್ತು ಭಾರತದ ಚುನಾವಣಾ ಆಯೋಗದ ಇಸಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದನ್ನು ವಿಶ್ಲೇಷಿಸಿದ್ದಾರೆ
ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾ. ಜೆ ಬಿ ಪರಿದಿವಾಲ ಮತ್ತು ನ್ಯಾ. ಮನೋಜ್ ಮಿಶ್ರ ಅವರ ಸಾಂವಿಧಾನಿಕ ಪೀಠದ ಮುಂದೆ ಮಂಡಿಸಲಾಗಿದ್ದ ಪ್ರಮುಖವಾದಗಳಲ್ಲಿ ದೇಣಿಗೆಯ ಹೆಚ್ಚಿನ ಭಾಗವು ಕೇಂದ್ರದಲ್ಲಿ ಆಡಳಿತದ ಪಕ್ಷಕ್ಕೆ ಹೋಗುತಿದೆ ಎಂಬುದಾಗಿದೆ ಎಂಬುದು ದತ್ತಾಂಶಗಳಿಂದ ಬಯಲಾಗಿದೆ
ಬಾಂಡುಗಳ ಮೂಲಕ ಹೆಚ್ಚಿನ ಕೊಡುಗೆಯು ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ಪಕ್ಷಗಳಾಗಿರುವ ರಾಜಕೀಯ ಪಕ್ಷಗಳಿಗೆ ಹೋಗಿದೆ ಎಂಬುದು ಲಭ್ಯವಿರುವ ದತ್ತಾಂಶಗಳಿಂದ ಸ್ಪಷ್ಟವಾಗಿದೆ ಎಂದು ನ್ಯಾ ಖಂಡ ಹೇಳಿದ್ದಾರೆ