ದೂರದರ್ಶನದಲ್ಲಿ ವರದಿಗಾರನಾಗಲು ಅವಕಾಶ: ಆಸಕ್ತರಿಂದ ಅರ್ಜಿ ಆಹ್ವಾನ
ದೂರದರ್ಶನದಲ್ಲಿ ವರದಿಗಾರನಾಗಲು ಅವಕಾಶ: ಆಸಕ್ತರಿಂದ ಅರ್ಜಿ ಆಹ್ವಾನ
ಸರ್ಕಾರಿ ಸ್ವಾಮ್ಯದ ಟೆಲಿವಿಷನ್ ವಾಹಿನಿ ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ ಅರೆಕಾಲಿಕ (Stringer) ವರದಿಗಾರ ಹುದ್ದೆಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದ ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗದಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ Stringer/ಸ್ಟ್ರಿಂಜರ್ ಆಗಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.03.2024
ಶಿವಮೊಗ್ಗ, ದಾವಣಗೆರೆ, ಬಾಗಲ ಕೋಟೆ, ಚಾಮರಾಜ ನಗರ, ಗದಗ, ಕಲ್ಬುರ್ಗಿ, ಕೊಡಗು, ಮಂಡ್ಯ, ರಾಯಚೂರು, ರಾಮನಗರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸ್ಟ್ರಿಂಜರ್‌ಗಳ ಹುದ್ದೆ ಖಾಲಿ ಇದ್ದು, ಆಯಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಉತ್ಸಾಹಿ ಯುವಜನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ವಿವರಕ್ಕಾಗಿ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:
https://prasarbharati.gov.in/pbvacancies
ಈ ಮೇಲಿನ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಕೌಶಲ್ಯ ಪರೀಕ್ಷೆ ಹಾಗೂ ಅಭ್ಯರ್ಥಿಗಳ ಸಂದರ್ಶನದ ಮೂಲಕ ನಡೆಸಲಾಗುತ್ತದೆ. ಅರ್ಜಿಗಳನ್ನು ಪ್ರಾದೇಶಿಕ ಸುದ್ದಿ ವಿಭಾಗ, ದೂರದರ್ಶನ ಕೇಂದ್ರ, ಜೆ.ಸಿ. ನಗರ, ಬೆಂಗಳೂರ 560006 ಇಲ್ಲಿಗೆ ಅಂಚೆ ಮೂಲಕ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ದೂರದರ್ಶನ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗದ ಉಪನಿರ್ದೇಶಕರ ದೂರವಾಣಿ ಸಂಖ್ಯೆಯನ್ನು ಪಡೆಯಬಹುದು.
ಶ್ರೀ ಕೇಶವ ಮೂರ್ತಿ 9448490242