
HSRP ನಂಬರ್ ಪ್ಲೇಟ್: 15 ವರ್ಷಕ್ಕಿಂತ ಹಳೆಯ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ
HSRP ನಂಬರ್ ಪ್ಲೇಟ್: 15 ವರ್ಷಕ್ಕಿಂತ ಹಳೆಯ ವಾಹನಗಳ ಮಾಲೀಕರಿಗೆ ಸಿಹಿ ಸುದ್ದಿ
ಇದು ಹಳೆ ವಾಹನ ಮಾಲೀಕರಿಗೆ ನಿಜಕ್ಕೂ ಸಿಹಿ ಸುದ್ದಿ. 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ HSRP (ಹೊಸ ನಂಬರ್ ಪ್ಲೇಟ್) ನೀಡುವುದಿಲ್ಲ ಎಂಬ ಸುಳ್ಳು ಸುದ್ದಿ ಜನಸಾಮಾನ್ಯರ ನಡುವೆ ಹರಿದಾಡುತ್ತಿದೆ.
ಬೆಂಗಳೂರಿನ ರಾಜಾಜಿನಗರ ನಿವಾಸಿ ಮಧು ಕುಮಾರ್ ಅವರ ಬಜಾಜ್ ಪಲ್ಸರ್ 150 ಬೈಕಿಗೆ 15 ವರ್ಷವಾಗಿದೆ. ಆರು ತಿಂಗಳ ಹಿಂದೆಯಷ್ಟೇ ಅದರ ಅರ್ಹತಾ ಪತ್ರವನ್ನು (ಫಿಟ್‌ನೆಸ್ ಸರ್ಟಿಫಿಕೇಟ್) ನವೀಕರಿಸಿದ್ದಾರೆ.
ಆದರೆ ಅವರ ಬೈಕಿಗೆ HSRP ಖರೀದಿಸಲು ಸಾಧ್ಯವಾಗುತ್ತಿಲ್ಲ ಖರೀದಿ ವೇಳೆ ನಿಮ್ಮ ವಾಹನದ ವಿವರ ತಾಳೆ ಆಗುತ್ತಿಲ್ಲ ಎಂಬ ಸಂದೇಶ ಬರುತ್ತಿದೆ. ವರ್ಷಕ್ಕಿಂತ ಹಳೆಯ ವಾಹನಕ್ಕೆ ಎಚ್ ಎಸ್ ಆರ್ ಪಿ ನೀಡುವುದಿಲ್ಲ ಹೀಗಾಗಿ ಬೈಕ್ ಮಾರಾಟ ಮಾಡುತ್ತೇನೆ ಎಂದು ಹೊರಟೆ. ಆದರೆ ಎಚ್ಎಸ್ಆರ್‌ಪಿ ಇಲ್ಲ ಎಂದು ಬೈಕ್ ಕೊಳ್ಳುವವರೇ ಇಲ್ಲ ಎಂದು ವಿವರಿಸಿದ್ದರು.
ಆದರೆ, ಇದು ನಿಜವಲ್ಲ HSRP ಪಡೆಯಲು ವಾಹನ ಎಷ್ಟೇ ಹಳೆಯದಾಗಿದ್ದರೂ ಸಮಸ್ಯೆ ಇಲ್ಲ. 25 ವರ್ಷಕ್ಕಿಂತ ಹಳೆಯ ವಾಹನಗಳಿಗೂ HSRP ದೊರೆತಿದೆ.
ನಿಮಗೆ ಹಳೆಯ ವಾಹನಕ್ಕೆ HSRP ನಂಬರ್ ಪ್ಲೇಟ್ ಸಿಗದಿದ್ದರೆ ಚಿಂತೆ ಬೇಡ. ವಾಹನದ ನೈಜ ವಿವರ ಹಾಗೂ ವಾಹನ ಪೋರ್ಟಲ್ ನಲ್ಲಿ ಇರುವ ವಿವರ ತಾಳೆಯಾಗದೆ ಇರುವುದರಿಂದ ಹೀಗೆ ಆಗಿರಬಹುದು, ಸಂಬಂಧಿತ ಆರ್ ಟಿ ಓ ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿಯನ್ನು ಕೊಟ್ಟು ವಿವರ ಸರಿಪಡಿಸಿಕೊಂಡರೆ ಈ ಸಮಸ್ಯೆ ಬಗೆಹರಿಯುತ್ತದೆ.
HSRP ಬಗ್ಗೆ ಜನರಲ್ಲಿ ಇರುವ ಇಂತಹ ಸುಳ್ಳು ಮಾಹಿತಿಗಳನ್ನು ಹೋಗಲಾಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡಬೇಕಾಗಿದೆ.