
ಉದ್ಯೋಗ ಕಡಿತದಲ್ಲಿ ಅಗ್ರಸ್ಥಾನ ಯಾರದ್ದು?: ಭಾರತಕ್ಕೆ ಎರಡನೇ ಸ್ಥಾನ! ಕೆಲಸ ಕಳೆದುಕೊಂಡವರ ಸಂಖ್ಯೆ ಎಷ್ಟು ಗೊತ್ತೇ..?
ಉದ್ಯೋಗ ಕಡಿತದಲ್ಲಿ ಅಗ್ರಸ್ಥಾನ ಯಾರದ್ದು?: ಭಾರತಕ್ಕೆ ಎರಡನೇ ಸ್ಥಾನ! ಕೆಲಸ ಕಳೆದುಕೊಂಡವರ ಸಂಖ್ಯೆ ಎಷ್ಟು ಗೊತ್ತೇ..?
ಕೊರೋನ ಕಾಲ ಮತ್ತು ಆ ನಂತರದ ಕಾಲಘಟ್ಟದಲ್ಲಿ ಜಗತ್ತಿನಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಕೋಟಿಗಟ್ಟಲೆ... ಈ ಪೈಕಿ ದೊಡ್ಡ ಪ್ರಮಾಣದಲ್ಲಿ ಯುವಜನರದ್ದೇ ದೊಡ್ಡ ಪಾಲು.
ಜಗತ್ತಿನ ಒಟ್ಟು ಉದ್ಯೋಗ ಕಳೆದುಕೊಂಡ ಜನರ ಪ್ರಮಾಣದಲ್ಲಿ ಶೇಕಡಾ 70ರಷ್ಟು ಪಾಲು ಅಮೇರಿಕಾದ್ದು.
ಆ ನಂತರದ ಸ್ಥಾನದಲ್ಲಿ ಭಾರತ ಇದೆ. ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಜರ್ಮನಿ, ಸ್ವೀಡನ್ ಪಡೆದುಕೊಂಡಿದೆ. ಐರೋಪ್ಯ ದೇಶಗಳು ಆ ನಂತರದ ಸ್ಥಾನವನ್ನು ಪಡೆದುಕೊಂಡಿದೆ.
ಅತಿ ಹೆಚ್ಚು ಕೆಲಸ ಕಳೆದುಕೊಂಡ ಕ್ಷೇತ್ರಗಳು...
ಆಹಾರ ಉದ್ಯಮದಲ್ಲಿ ಅತಿ ಹೆಚ್ಚು ಮಂದಿ ತಮ್ಮ ಕೆಲಸಕ್ಕೆ ಸಂಚಕಾರ ತಂದುಕೊಂಡಿದ್ದಾರೆ. ಫೈನಾನ್ಸಿಯಲ್ ಸೆಕ್ಟರ್ ಎರಡನೇ ಸ್ಥಾನದಲ್ಲಿ ಇದ್ದು, ಉದ್ಯೋಗ ಕಳೆದುಕೊಂಡವರ ಸಂಖ್ಯೆ ಇಲ್ಲೂ ಗಣನೀಯವಾಗಿದೆ. ಇನ್ನು ರೀಟೇಲ್ ಉದ್ಯಮ, ಗ್ರಾಹಕ ಉತ್ಪನ್ನಗಳ ಕ್ಷೇತ್ರ ಮತ್ತು ಆರೋಗ್ಯ ಕ್ಷೇತ್ರ ಕ್ರಮವಾಗಿ ಆ ನಂತರದ ಸ್ಥಾನದಲ್ಲಿ ಇದೆ..