-->

ಆದಿದ್ರಾವಿಡ ಸಮುದಾಯಕ್ಕೆ ನೀಡುವ  ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಾಧ್ಯತೆ: ಮುಂಚೂಣಿಯಲ್ಲಿ ಮಂಗಳೂರಿನ ಪ್ರೇಮ್ ನಾಥ್ ಪಿ ಬಿ ಬಳ್ಳಾಲ್ ಬಾಗ್ ಹೆಸರು

ಆದಿದ್ರಾವಿಡ ಸಮುದಾಯಕ್ಕೆ ನೀಡುವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಾಧ್ಯತೆ: ಮುಂಚೂಣಿಯಲ್ಲಿ ಮಂಗಳೂರಿನ ಪ್ರೇಮ್ ನಾಥ್ ಪಿ ಬಿ ಬಳ್ಳಾಲ್ ಬಾಗ್ ಹೆಸರು

ಆದಿದ್ರಾವಿಡ ಸಮುದಾಯಕ್ಕೆ ನೀಡುವ  ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಾಧ್ಯತೆ: ಮುಂಚೂಣಿಯಲ್ಲಿ ಮಂಗಳೂರಿನ ಪ್ರೇಮ್ ನಾಥ್ ಪಿ ಬಿ ಬಳ್ಳಾಲ್ ಬಾಗ್ ಹೆಸರು

 


ಮಂಗಳೂರು ತಾಲೂಕಿನ  ಬಳ್ಳಾಲ್ ಬಾಗ್, ವಿವೇಕ ನಗರ ಎಂಬಲ್ಲಿ  ಸಜ್ಜನ ವ್ಯಕ್ತಿಗಳಾದ  ದಿವಂಗತ ಎಚ್, ಎಮ್ ಬಾಬು  ಪುತ್ತೂರು ಹಾಗೂ ಶ್ರೀಮತಿ ಪೂವಮ್ಮ ಮಿಜಾರು  ದಂಪತಿಗಳ ಸುಪುತ್ರರಾಗಿ  ಜನಿಸಿದ ಪ್ರೇಮ್ ನಾಥ್ ಪಿ ಬಿ ಒಬ್ಬ ಸರಳ ವ್ಯಕ್ತಿತ್ವದ ನೇರ ನುಡಿಯ ಆದಿದ್ರಾವಿಡ ಸಮಾಜದ ಜನಸೇವಕ.

ಮಂಗಳೂರು ಕೆನರಾ ಪ್ರೌಢಶಾಲೆಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿ, .ಟಿ. ವ್ಯಾಸಾಂಗ ಮಾಡಿರುವ  ಇವರು ಮುಂದೆ ತನಗೆ ಅರಿವಿಲ್ಲದಂತೆ ಪೂರ್ಣ ಪ್ರಮಾಣದ ಸಮಾಜ ಸೇವಕರಾಗಿ ಬೆಳೆದು ಬಂದಿದ್ದು ಒಂದು ಇತಿಹಾಸ, ಸಮಾಜದ ವಿವಿಧ ಕ್ಷೇತ್ರಗಳಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ,  ಕ್ರೀಡಾ ಧಾರ್ಮಿಕ ಕ್ಷೇತ್ರದಲ್ಲಿ ತನ್ನ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರ ಸೇವಾ  ಕಾರ್ಯವೈಖರಿಯು ಶ್ಲಾಘನೀಯವಾಗಿದ್ದು. ದಲಿತ ಸಂಘರ್ಷ ಸಮಿತಿಯ ಮುಖಂಡರಾಗಿದ್ದ ದಿವಂಗತ ಪಿ.ಕೇಶವ ಇವರ ಸಮುದಾಯ ಪರ ಹೋರಾಟದ ಕಾರ್ಯವೈಖರಿಗೆ ಮನಸೋತ ಪ್ರೇಮ್ ನಾಥ್ ಪಿ.ಬಿ ಯವರು ಮುಂದಿನ ದಿನಗಳಲ್ಲಿ ತಾನು ಕೂಡ ದಲಿತ ಪರ ಧ್ವನಿಯಾಗಿ ಆದಿದ್ರಾವಿಡ ಸಮುದಾಯದ ಕಷ್ಟ ಕಾರ್ಪಣ್ಯಗಳಿಗೆ ಮಿಡಿಯುತ್ತ ಸಮುದಾಯದ ಸೇವೆ ಅಭಿವೃದ್ಧಿಗೆ ತನ್ನನ್ನು ತಾನು ತೊಡಗಿಸಿಕೊಂಡು ಬಂದವರು.

ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ಸೇರಿದಂತೆ ಪರಿಶಿಷ್ಟ ಜಾತಿಯ ಆದಿದ್ರಾವಿಡ ಸಮುದಾಯದ ಹಾಗೂ ಇನ್ನಿತರ ಸಮುದಾಯದ ಪಂಗಡಗಳ ಶಿಕ್ಷಣ ಆಕಾಂಕ್ಷಿಗಳಿಗೆ ಶಿಕ್ಷಣ, ವಸತಿ ಶಾಲೆಗಳಲ್ಲಿ ದಾಖಲಾತಿ ಹೊರ ಜಿಲ್ಲೆಗಳಿಂದ ಮಂಗಳೂರಿಗೆ ಆಗಮಿಸುವ ಅನಾರೋಗ್ಯ ಪೀಡಿತ ರೋಗಿಗಳಿಗೆ ಸಕಾಲಿಕ ವೈದ್ಯಕೀಯ ನೆರವಿನ ವ್ಯವಸ್ಥೆ ಸೇರಿದಂತೆ ಸ್ವಜಾತಿ ಸಮುದಾಯ ಹಾಗೂ ದಲಿತ ಪರ ಸಂಘಟನೆಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಾ ಬಂದಿರುತ್ತಾರೆ.

ಆದಿದ್ರಾವಿಡ ಸಮುದಾಯದ ಸಂಘಟನೆಗಳಲ್ಲಿ ಗುರುತಿಸಿ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಸಂಚಾಲಕರಾಗಿ ಕರ್ನಾಟಕ ಸರಕಾರದ ಮಂಗಳೂರು ನಗರ ಮಹಾನಗರ ಪಾಲಿಕೆಯ ಮಾಜಿ ನಾಮ ನಿರ್ದೇಶನ ಸದಸ್ಯರಾಗಿ ಹಾಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಜಿಲ್ಲೆ ಇದರ ಕೋಶಾಧಿಕಾರಿಯಗಿದ್ದು, ಸಮುದಾಯದ ಸಂಘಟನೆಗಳು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ನೀಡಿರುವ ಜವಾಬ್ದಾರಿಯುತ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವುದಲ್ಲದೆ ಸರಕಾರದ ಯೋಜನೆಗಳನ್ನು ಸಮುದಾಯದ ಹಾಗೂ ಇತರ ಪಂಗಡಗಳ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಪರಿಚಯಿಸಿ ದೊರಕಿಸಿಕೊಟ್ಟು ಸಮಾಜದ ಮೆಚ್ಚುಗೆಗೆ ಭಾಜನರಾಗಿರುತ್ತಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಸಂಚಾಲಕರಾಗಿರುವ ಶ್ರೀಯುತರು ರಾಜ್ಯಾಧ್ಯಕ್ಷರಾದ ಶಿವಾನಂದ ಬಳ್ಳಾಲ್ ಬಾಗ್ ಹಾಗೂ ಆದಿದ್ರಾವಿಡ ಸಮುದಾಯದ ಪರ ಇರುವ ಕ್ರಿಯಾಶೀಲ ತಂಡ ಹಾಗೂ ರಾಜ್ಯ, ಜಿಲ್ಲೆ, ತಾಲೂಕು ಅಧ್ಯಕ್ಷರು ಪದಾಧಿಕಾರಿಗಳ ಸಹಕಾರದೊಂದಿಗೆ ರಾಜ್ಯದ ಚಿಕ್ಕ ಮಗಳೂರು ಜಿಲ್ಲೆ, ಕೊಪ್ಪ, ಮೂಡಿಗೆರೆ, ಕಳಸ, ಹಾಗೂ ಚಿಕ್ಕಮಗಳೂರು ತಾಲೂಕು ಹಾಸನ ಜಿಲ್ಲೆ ಹಾಗೂ ಸಕಲೇಶಪುರ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ, ಬಂಟ್ವಾಳ ಪುತ್ತೂರು, ಸುಳ್ಯ, ಮಂಗಳೂರು ಹಾಗೂ ಮೂಡಬಿದ್ರೆ ತಾಲೂಕು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು  ನೆರೆ ರಾಜ್ಯದ ಕಾಸರಗೋಡು ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ ಗ್ರಾಮ ಘಟಕಗಳನ್ನು ರಚಿಸಲು ಸಹಕಾರ ನೀಡಿ  ಆದಿದ್ರಾವಿಡ ಸಮಾಜವನ್ನು ಒಗ್ಗೂಡಿಸುವ ಮೂಲಕ ರಾಜ್ಯದ ಆದಿದ್ರಾವಿಡ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ಕರೆತ್ತಿರುವ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ.

ರಾಜಕೀಯ ಕ್ಷೇತ್ರದಲ್ಲಿ

(1) ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ  ಜಾತಿ ವಿಭಾಗದ ಸಂಘಟನಾ ಕಾರ್ಯದರ್ಶಿ

 

(2) ಮಂಗಳೂರು ನಗರ ಉತ್ತರ  ಬ್ಲಾಕ್ ಕಿಸಾನ್ ಮತ್ತು ಕಾರ್ಮಿಕ  ಸಮಿತಿ ಇದರ ಜಂಟಿ ಕಾರ್ಯದರ್ಶಿ

 

(3) ಮಂಗಳೂರು ಉತ್ತರ ವಲಯ ಯುವ ಕಾಂಗ್ರೆಸ್ ಇದರ ಪ್ರಧಾನ ಕಾರ್ಯದರ್ಶಿ

 

(4) ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಕೋರ್ ಕಮಿಟಿ ಸದಸ್ಯರು

 

(5) ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷರು

 

(6) ಮಂಗಳೂರು ಮಹಾನಗರ ಪಾಲಿಕೆ ಮಾಜಿ ನಾಮ ನಿರ್ದೇಶನ ಸದಸ್ಯರು

 

(7) ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಇದರ  ಪ್ರಧಾನ ಕಾರ್ಯದರ್ಶಿ

 

(8) 2023ನೇ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ  ಜಂಟಿ ಸಂಯೋಜಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘವು ಇತ್ತೀಚಿಗಷ್ಟೇ ನಡೆಸಿರುವ  ತುಳು ಆದಿದ್ರಾವಿಡ ಸಮುದಾಯದ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸಮಾವೇಶಕ್ಕೆ ರಾಜ್ಯದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಡಾl ಜಿ ಪರಮೇಶ್ವರ್ ಇವರನ್ನು ರಾಜ್ಯ ಸಂಘಟನೆಯ ಪರವಾಗಿ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿ  ಕಾರ್ಯಕ್ರಮದ  ಯಶಸ್ವಿಗೆ  ಪಾತ್ರರಾಗಿರುತ್ತಾರೆ. ಅಲ್ಲದೆ  ಡಾl ಜಿ ಪರಮೇಶ್ವರ್  ಇವರಿಂದ ಸನ್ಮಾನವನ್ನು ಸ್ವೀಕರಿಸುವ ಯೋಗ್ಯ ಭಾಗ್ಯವು ಕೂಡಿಬಂದಿರುತ್ತದೆ.

 ಇತ್ತೀಚೆಗೆ ನಡೆದ ರಾಜ್ಯ ಆದಿದ್ರಾವಿಡ ಸಮಾವೇಶದಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರು ಬಾರಿ ಕರ್ನಾಟಕ ಸರಕಾರದ ನಿಗಮ/ ಮಂಡಳಿಯಲ್ಲಿ ಆದಿದ್ರಾವಿಡ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನು ನೀಡುವುದಾಗಿ ಘೋಷಿಸಿರುತ್ತಾರೆ.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಸಂಚಾಲಕರಾಗಿರುವ ಶ್ರೀಯುತರು ಶೈಕ್ಷಣಿಕ, ಕ್ರೀಡೆ, ಧಾರ್ಮಿಕ, ಹಾಗೂ ಸಾಮಾಜಿಕ ಕ್ಷೇತ್ರಗಳ ಸೇವಾ ಮನೋಭಾವವನ್ನು  ಸೇವೆಯನ್ನು ಗಮನಿಸಿದರೆ ಸಂಘಟನಾ ಚತುರರಾಗಿರುವ  ಆದಿದ್ರಾವಿಡ ಸಮುದಾಯದ ಪರ ಒಲವು ಇರುವ  ಶ್ರೀಯುತ ಪ್ರೇಮ್ ನಾಥ್ ಪಿ.ಬಿ ಬಳ್ಳಾಲ್ ಬಾಗ್ ಇವರನ್ನು ಜಿಲ್ಲೆ ತಾಲೂಕು ಗ್ರಾಮ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಆದಿದ್ರಾವಿಡ ಸಮುದಾಯದ ಜನರು ನಿಗಮ/ಮಂಡಳಿಯಲ್ಲಿ ಅಧ್ಯಕ್ಷರಾಗುವಂತೆ ಇಂಗಿತ, ಅಭಿಪ್ರಾಯ ಹಾಗೂ ಬೆಂಬಲ ನೀಡುತ್ತೇವೆ ಎಂದು  ವ್ಯಕ್ತಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99