ದ.ಕ. ಜಿಲ್ಲಾ ಸರ್ಕಾರಿ ಅಧಿಕಾರಿಗಳ ಸಹಕಾರಿ ಸಂಘದ ಚುನಾವಣೆ: ಪ್ರಕಾಶ್ ನಾಯಕ್ ಸಹಿತ ನ್ಯಾಯಾಂಗ ಇಲಾಖೆಯ ಅಭ್ಯರ್ಥಿಗಳಿಗೆ ಭರ್ಜರಿ ಜಯ
ದ.ಕ. ಜಿಲ್ಲಾ ಸರ್ಕಾರಿ ಅಧಿಕಾರಿಗಳ ಸಹಕಾರಿ ಸಂಘದ ಚುನಾವಣೆ: ಪ್ರಕಾಶ್ ನಾಯಕ್ ಸಹಿತ ನ್ಯಾಯಾಂಗ ಇಲಾಖೆಯ ಅಭ್ಯರ್ಥಿಗಳಿಗೆ ಭರ್ಜರಿ ಜಯ
ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್, ಡೊಂಗರಕೇರಿ, ಮಂಗಳೂರು ಇದರ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನ್ಯಾಯಾಂಗ ಇಲಾಖೆಯ ಎಲ್ಲಾ ನಾಲ್ವರು ಅಭ್ಯರ್ಥಿಗಳು ಭರ್ಜರಿ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ನ್ಯಾಯಾಂಗ ಇಲಾಖೆಯಿಂದ ಶ್ರೀ ಪ್ರಕಾಶ್ ನಾಯಕ್, ಶ್ರೀ ಪಾಂಡುರಂಗ ಯು, ಶ್ರೀ ಮಾಲತೇಶ್ ಲಾಠಿ ಹಾಗೂ ಶ್ರೀಮತಿ ಸಬಿತಾ ಸೆರಾವೊ ಅವರು ಸ್ಪರ್ಧಿಸಿದ್ದರು. ಸ್ಪರ್ಧಿಸಿದ ನಾಲ್ವರೂ ಜಯಶಾಲಿಯಾಗಿದ್ದಾರೆ.
ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಶ್ರೀ ಪ್ರಕಾಶ್ ನಾಯಕ್ ಅವರು ಅತ್ಯಧಿಕ ಮತಗಳನ್ನು ಪಡೆದಿರುತ್ತಾರೆ. ಶ್ರೀ ಪ್ರಕಾಶ್ ನಾಯಕ್ ಅವರು ಬ್ಯಾಂಕಿನ ಹಾಲಿ ಅಧ್ಯಕ್ಷರಾಗಿರುತ್ತಾರೆ.
ಮುಂದಿನ 15 ದಿನಗಳಲ್ಲಿ ಚುನಾಯಿತ ನಿರ್ದೇಶಕರುಗಳು ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ. ನ್ಯಾಯಾಂಗ ಇಲಾಖೆಯಿಂದ ಆಯ್ಕೆಯಾದ ನಾಲ್ವರು ಅಭ್ಯರ್ಥಿಗಳು ಒಗ್ಗಟ್ಟು ಪ್ರದರ್ಶಿಸಿದಲ್ಲಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಎರಡೂ ಹುದ್ದೆಗಳನ್ನು ನ್ಯಾಯಾಂಗ ಇಲಾಖೆಯವರೇ ಪಡೆಯಲು ಅವಕಾಶವಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶ ಆಯ್ಕೆಯಾದ ನ್ಯಾಯಾಂಗ ಇಲಾಖೆಯ ನಾಲ್ವರು ಅಭ್ಯರ್ಥಿಗಳಿಗೆ ಇರುವುದರಿಂದ ನಾಲ್ವರು ಅಭ್ಯರ್ಥಿಗಳು ಒಗ್ಗಟ್ಟು ಪ್ರದರ್ಶಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ನ್ಯಾಯಾಂಗ ಇಲಾಖೆಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ಉಜ್ವಲ ಅವಕಾಶ ಇದೆ. ತನ್ಮೂಲಕ ತಮ್ಮನ್ನು ಆಯ್ಕೆ ಮಾಡಿದ ನ್ಯಾಯಾಂಗ ಇಲಾಖೆಯ ಮತದಾರ ಬಂಧುಗಳಿಗೆ ಹಾಗೂ ಬ್ಯಾಂಕಿನ ಸದಸ್ಯರುಗಳಿಗೆ ಉತ್ತಮ ಸೇವೆ ನೀಡುವ ಅವಕಾಶ ಲಭ್ಯವಾಗುವುದು.
ಬ್ಯಾಂಕಿನ ಹಾಲಿ ಆಡಳಿತ ಮಂಡಳಿಯ ಅವಧಿ 20.01.2024ರಂದು ಕೊನೆಗೊಳ್ಳುತ್ತದೆ. ಬಳಿಕ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುತ್ತದೆ.
ನ್ಯಾಯಾಂಗ ಇಲಾಖೆಯ ಅಭ್ಯರ್ಥಿಗಳು ಒಗ್ಗಟ್ಟು ಪ್ರದರ್ಶಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ನ್ಯಾಯಾಂಗ ಇಲಾಖೆಯವರೇ ಅಲಂಕರಿಸುವಂತಾಗಲಿ ಎಂದು ಹಾಲಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಆಶಯ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದ ನ್ಯಾಯಾಂಗ ಇಲಾಖೆಯ ಎಲ್ಲಾ ಅಭ್ಯರ್ಥಿಗಳನ್ನು ಜಯಶಾಲಿಗಳನ್ನಾಗಿ ಮಾಡಿದ ಮತದಾರ ಬಾಂಧವರಿಗೆ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.