ಡಿಜಿಟಲ್ ಪೇಮೆಂಟಿಗೆ G Pay, PhonePe ಬಳಸುತ್ತೀರಾ..? ಹಾಗಿದ್ದರೆ ಈ ಸುದ್ದಿ ಖಂಡಿತಾ ನೋಡಿ...
ಡಿಜಿಟಲ್ ಪೇಮೆಂಟಿಗೆ G Pay, PhonePe ಬಳಸುತ್ತೀರಾ..? ಹಾಗಿದ್ದರೆ ಈ ಸುದ್ದಿ ಖಂಡಿತಾ ನೋಡಿ...
ಗೂಗಲ್ ಪೇ, ಫೋನ್ ಪೇ ಸೇರಿದಂತೆ ಡಿಜಿಟಲ್ ಪಾವತಿಯಲ್ಲಿ 2024ರಲ್ಲಿ ದೊಡ್ಡ ರೀತಿಯ ಬದಲಾವಣೆ ಜಾರಿಗೆ ಬಂದಿದೆ...
ಮೊಬೈಲ್ ಆಧರಿಸಿ ಹಣ ವರ್ಗಾವಣೆ ಮಾಡುವ ಯುನಿಫೈಡ್ ಪೇಮೆಂಟ್ ಗೇಟ್‌ವೇ (UPI) ನಮ್ಮ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ವೇದಿಕೆಯಾಗಿದೆ.
ಜನರೂ ಪಾವತಿ ವಿಧಾನದಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಜಮೆ ಇದ್ದ ಹಣವನ್ನು ತಮಗಿಷ್ಟ ಬಂದಂತೆ ಬಳಸುತ್ತಿದ್ದಾರೆ. ಇದರಿಂದ ವಿಶ್ವದಲ್ಲೇ ಭಾರತವು ಡಿಜಿಟಲ್ ಮಾದರಿಯಲ್ಲಿ ವಹಿವಾಟು ನಡೆಸುವ ಅತಿ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿ ಪರಿಗಣಿಸುತ್ತಿದೆ.
2024ರ ಜನವರಿಯಿಂದ ಏನೆಲ್ಲ ಬದಲಾವಣೆಗಳು ಆಗಲಿವೆ..?
1 ವ್ಯವಹಾರ ನಡೆಯದ ಯುಪಿಐ ಐಡಿಗಳು ನಿಷ್ಕ್ರಿಯ: ಗೂಗಲ್ ಪೇ ಅಥವಾ ಫೋನ್ ಪೇ ಆಪ್‌ನ್ನು ಸಕ್ರಿಯವಾಗಿ ಬಳಸಬೇಕು. ಮತ್ತು ಯುಪಿಐ ಐಡಿಗಳನ್ನು ಪರಿಶೀಲಿಸುತ್ತಿರಬೇಕು ಮತ್ತು ನಿರ್ವಹಿಸುತ್ತಿರಬೇಕು. ರಾಷ್ಟ್ರೀಯ ಪಾವತಿಗಳ ನಿಗಮ NPCI ಒಂದು ವರ್ಷ ನಿಷ್ಕ್ರಿಯವಾಗಿರುವ ಯುಪಿಐಗಳನ್ನು ನಿಷ್ಟ್ರಿಯಗೊಳಿಸಲು ಸೂಚನೆ ನೀಡಿದೆ.
2 ಯುಪಿಐ ಫಾರ್ ಸೆಕಂಡರಿ ಮಾರ್ಕೆಟ್: ರಾಷ್ಟ್ರೀಯ ಪಾವತಿಗಳ ನಿಗಮ NPCI ಯುಪಿಐ ಫಾರ್ ಸೆಕೆಂಡರ್ ಮಾರ್ಕೆಟ್ ಬೀಟಾ ಹಂತವನ್ನು ಪ್ರವೇಶಿಸುತ್ತದೆ. ಸೀಮಿತ ಪೈಲಟ್ ಗ್ರಾಹಕರು ಹಣವನ್ನು ವ್ಯಾಪಾರದ ನಂತರ ದೃಢೀಕರಣವನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ.
3 ಹೆಚ್ಚಿದ ವಹಿವಾಟು ಮಿತಿ: ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ವಹಿವಾಟಿನ ಮಿತಿಯನ್ನು ಆರ್‌ಬಿಐ ಒಂದು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಈ ಮಿತಿಯನ್ನು ಹೆಚ್ಚಿಸಲಾಗಿದೆ.
4 ಕ್ಯೂ ಆರ್ ಕೋಡ್ ಮೂಲಕ ನಗದು ಹಣ:ಭಾರತದ ಮೊದಲ ಯುಪಿಐ-ಎಟಿಎಂ ಅನ್ನು ಪ್ರಾರಂಭಿಸುತ್ತಿದೆ. ಇದು ರಾಷ್ಟ್ರೀಯ ಪಾವತಿಗಳ ನಿಗಮ NPCI ದ ಸಹಯೋಗದಿಂದ ರಾಷ್ಟ್ರ ವ್ಯಾಪಿಯಾಗಿ ಆರಂಭವಾಗಲಿದೆ. ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ನಗದು ಹಣ ಪಾವತಿ ಮಾಡಲಾಗುತ್ತದೆ.
5 ಮೊದಲ ಪಾವತಿಗಳಿಗಾಗಿ 4 ಗಂಟೆಗಳ ಅವಕಾಶ: ಹೊಸ ಸ್ವೀಕೃತದಾರರಿಗೆ ಎರಡು ಸಾವಿರ ರೂ.ಗಿಂತ ಹೆಚ್ಚಿನ ಮೊದಲ ಪಾವತಿಯನ್ನು ಪ್ರಾರಂಭಿಸುವ ಬಳಕೆದಾರರಿಗೆ 4 ಗಂಟೆಗಳ ವಿಂಡೋವನ್ನು ಆರ್‌ಬಿಐ ಪ್ರಸ್ತಾಪಿಸುತ್ತಿದೆ. ವಹಿವಾಟು ರಿವರ್ಸಲ್ ಅಥವಾ ಮಾರ್ಪಾಡು, ನಿಯಂತ್ರಣ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ.
ಕಳೆದ ಆಗಸ್ಟ್ 2023ರ ಹೊತ್ತಿಗೆ ಯುಪಿಐ ಹೊಸ ದಾಖಲೆ ಸೃಷ್ಟಿಸಿತ್ತು. ಸಾವಿರ ಕೋಟಿ ವಹಿವಾಟುಗಳನ್ನು ಅದು ಮೀರಿ ನಿಂತಿತ್ತು. ಯುಪಿಐ ವಹಿವಾಟುಗಳು ನಡೆಸುವ ಹತ್ತು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.