-->

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರ ಮೇಲೆ ಆರೋಪ: ಎಷ್ಟು ಸುಳ್ಳು, ಎಷ್ಟು ಸತ್ಯ!

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರ ಮೇಲೆ ಆರೋಪ: ಎಷ್ಟು ಸುಳ್ಳು, ಎಷ್ಟು ಸತ್ಯ!

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರ ಮೇಲೆ ಆರೋಪ: ಎಷ್ಟು ಸುಳ್ಳು, ಎಷ್ಟು ಸತ್ಯ!





ನ್ಯಾಯಾಲಯದ ಆದೇಶದಿಂದ ಅನರ್ಹಗೊಂಡು ಹತಾಶನಾದ ಡಿ ಗ್ರೂಪ್ ನೌಕರನಿಂದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ನಾಯಕ್ ರವರ ವಿರುದ್ಧ ಆರೋಪ ಕಪೋಲ ಕಲ್ಪಿತವೇ...?


ಸರಕಾರಿ ನೌಕರರ ಸಂಘಟನೆಯ ಆಡಳಿತ ಚುಕ್ಕಾಣಿ ಹಿಡಿಯುವ ನೇತಾರರು ಸರಕಾರಿ ನೌಕರರ ಪರವಾದ ಕಾಯ್ದೆಗಳನ್ನು ರೂಪಿಸಲು, ನೌಕರರ ನ್ಯಾಯಯುತ ಹಕ್ಕುಗಳಿಗೆ ಮತ್ತು ಸೌಲಭ್ಯಗಳಿಗೆ ಚ್ಯುತಿ ಬಂದಾಗ ಅವುಗಳನ್ನು ಹೋರಾಟದ ಮೂಲಕ ದೊರಕಿಸಿಕೊಡಲು, ಸರಕಾರದ ಆಡಳಿತ ಯಂತ್ರದ ಬಹುಮುಖ್ಯ ಅಂಗವಾದ ನೌಕರರ ಹಿತಾಸಕ್ತಿಯನ್ನು ಕಾಪಾಡಿ ಅವರನ್ನು ಮುನ್ನಡೆಸುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದು ತಮ್ಮ ಈ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸಿ ನೌಕರರ ಬಗ್ಗೆ ತಮಗಿರುವ ಬದ್ಧತೆಯನ್ನು ಕಾರ್ಯಗತಗೊಳಿಸಲು ತಮ್ಮ ಅಧಿಕಾರಾವಧಿಯಲ್ಲಿ ನೌಕರರ ಎಲ್ಲಾ ಆಶೋತ್ತರಗಳನ್ನು ಈಡೇರಿಸಲು ಶ್ರಮಿಸಿದಲ್ಲಿ ಮಾತ್ರ ಸಂಘದ ಬಗ್ಗೆ ಮತ್ತು ಸಂಘದ ಪದಾಧಿಕಾರಿಗಳ ಬಗ್ಗೆ ನೌಕರರಿಗೆ ಅಭಿಮಾನ ಮೂಡಲು ಸಾಧ್ಯ.


ಗ್ರಂಥಾಲಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿರುವ ಪಿ.ಕೆ. ಕೃಷ್ಣ ಎಂಬವರು 2019- 24ನೇ ಸಾಲಿನ ಅವಧಿಗೆ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಚುನಾವಣೆಯಲ್ಲಿ ಅಕ್ರಮ ಎಸಗಿ ನ್ಯಾಯಾಲಯದ ವಿಚಾರಣೆಗೆ ಒಳಪಟ್ಟು ಅನರ್ಹಗೊಂಡ ಬಳಿಕ ಹತಾಶೆಯಿಂದ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರ ವಿರುದ್ಧ ಆಧಾರ ರಹಿತ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ತನ್ನ ಗೋರಿಯನ್ನು ತಾನೇ ತೋಡಿಕೊಂಡು ಜಿಲ್ಲಾ ಸಂಘದಲ್ಲಿ ಅವ್ಯವಹಾರ ಎಸಗಿದ ಕಾರಣ ನ್ಯಾಯಾಲಯದಿಂದ ವಿಚಾರಣೆಯ ತೂಗುಗತ್ತಿ ತನ್ನ ಮೇಲೆ ಎಳೆದುಕೊಂಡು ನಿವೃತ್ತಿಯ ಅಂಚಿನಲ್ಲಿರುವಾಗ ಕ್ರಿಮಿನಲ್ ಪ್ರಕರಣ ಈತನ ಮೇಲೆ ದಾಖಲಾಗಿ ತನ್ನ ಸ್ವಯಂಕೃತ ಅಪರಾಧದಿಂದ ಪಿಂಚಣಿಗೆ ಕುತ್ತು ಬರುವಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ತಾನೇ ಸ್ವತಃ ಕಾರಣಕರ್ತನಾಗಿದ್ದಾನೆ.


ನಾವು ಯಾವುದೇ ವಸ್ತುಗಳನ್ನು ಆರಿಸುವಾಗ ಅವುಗಳ ಗುಣಲಕ್ಷಣ, ಸ್ವಭಾವ, ಉಪಯುಕ್ತತೆ ಮತ್ತು ಸಾಮರ್ಥ್ಯಗಳನ್ನು ನೋಡುತ್ತೇವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಸರಕಾರಿ ನೌಕರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಆತನ ಹಿನ್ನೆಲೆ ಚಾರಿತ್ರ್ಯ, ಗುಣಲಕ್ಷಣಗಳನ್ನು ನೋಡದೆ ಅಸಮರ್ಥರನ್ನು ಚುನಾಯಿಸುವುದನ್ನು ಕಾಣುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಸರಕಾರಿ ನೌಕರರ ನಿರ್ಲಕ್ಷವೇ ಇಂದು ಪ್ರತಿಷ್ಠಿತ ದ.ಕ. ಜಿಲ್ಲಾ ಸಂಘಕ್ಕೆ ಓರ್ವ ಡಿ ಗ್ರೂಪ್ ನೌಕರನನ್ನು ಅಧ್ಯಕ್ಷನಾಗಿ ಮಾಡಲು ಕಾರಣವಾದ ಪ್ರಮುಖ ಅಂಶವಾಗಿದೆ. ರಾಜ್ಯದ ಉಳಿದ ಯಾವ ಜಿಲ್ಲೆಯಲ್ಲಿಯೂ ಡಿ ಗ್ರೂಪ್ ನೌಕರರನ್ನು ಜಿಲ್ಲಾ ಸಂಘದ ಪ್ರತಿನಿಧಿಯಾಗಿ ಮಾಡಲು ಕೂಡ ಅವಕಾಶ ನೀಡದಂತಹ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹುದ್ದೆಯ ಜವಾಬ್ದಾರಿಯುತ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಸರಕಾರಿ ನೌಕರರು ಡಿ ಗ್ರೂಪ್ ನೌಕರನಿಗೆ ಅವಕಾಶ ನೀಡಿ ಅದರ ಪರಿಣಾಮವನ್ನು ಈಗ ಅನುಭವಿಸುತ್ತಿರುವುದು ಜಿಲ್ಲಾ ಸಂಘದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ದಾಖಲಾಗುವುದರಲ್ಲಿ ಸಂದೇಹವೇ ಇಲ್ಲ.


ಪದಾಧಿಕಾರಿ ಹುದ್ದೆಯಿಂದ ಅನರ್ಹಗೊಂಡ ಬಳಿಕ ತೀರಾ ಹತಾಶೆಗೊಂಡ ಸಂದರ್ಭದಲ್ಲಿಯೇ ಸೌತ್ ಕೆನರಾ ಗೌರ್ಮೆಂಟ್ ಆಫೀಸರ್ಸ್ ಕೋಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಿಸಲ್ಪಟಿತು. ತಾನು ಜಿಲ್ಲಾಧ್ಯಕ್ಷ ಸ್ಥಾನದಿಂದ ಅನರ್ಹಗೊಂಡರೂ ಪ್ರಕಾಶ್ ನಾಯಕ್ ಅವರ ನೇತೃತ್ವದ ತಂಡಕ್ಕೆ ವಿರೋಧಿ ತಂಡವೊಂದನ್ನು ಕಟ್ಟಿ ಅದಕ್ಕೆ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ ಅವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಸ್ಪರ್ಧಿಸುವ ತಂಡ ಎಂಬ ಶಿರೋನಾಮೆ ಕೂಡ ನೀಡಿರುತ್ತಾರೆ.


ಪ್ರಕಾಶ್ ನಾಯಕ್ ಅವರ ನೇತೃತ್ವದ ತಂಡ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರರು ಜಿಲ್ಲಾಧ್ಯಕ್ಷ ಸ್ಥಾನದಿಂದ ಅನರ್ಹಗೊಂಡು ನ್ಯಾಯಾಲಯದ ಆದೇಶ ಪ್ರಕಾರ ಸಂಘದಲ್ಲಿ ಅವ್ಯವಹಾರ ನಡೆಸಿದ ಕಾರಣಕ್ಕಾಗಿ ವಿಚಾರಣೆಯ ತೂಗುಗತ್ತಿಯ ಆತನ ತಲೆಯ ಮೇಲಿದೆ ಎಂಬುದನ್ನು ವ್ಯಾಪಕವಾಗಿ ದಾಖಲೆಗಳ ಸಹಿತ ಪ್ರಚಾರ ಮಾಡಿದಾಗ ಅದನ್ನು ಎದುರಿಸಲಾಗದೆ ಪ್ರಕಾಶ್ ನಾಯಕ್ ಅವರು ಜಿಲ್ಲಾಧ್ಯಕ್ಷರ ಅವಧಿಯಲ್ಲಿ ನಡೆಸಿದ ಅವ್ಯವಹಾರದ ಬಗ್ಗೆ ರಾಜ್ಯಾಧ್ಯಕ್ಷರು ತನಿಖೆಗೆ ಆದೇಶಿಸಿದ್ದಾರೆ ಎಂಬ ಕಪೋಲ ಕಲ್ಪಿತ, ಆಧಾರ ರಹಿತ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಸಂಘದಲ್ಲಿ ಪಿ.ಕೆ.ಕೃಷ್ಣ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿರುವುದು ಸತ್ಯ ಸಂಗತಿಯಾಗಿದೆ. ಈ ಕುರಿತು ಜಿಲ್ಲಾ ಖಜಾಂಚಿಯಾಗಿದ್ದ ಶ್ರೀ ಅಕ್ಷಯ್ ಭಂಡಾರಕಾರ್ ಅವರು ಅವ್ಯವಹಾರದ ವಿವರಗಳನ್ನು ದಾಖಲೆ ಸಮೇತ ಕಾರ್ಯಕಾರಿ ಸಮಿತಿಯ ಅವಗಾಹನೆಗೆ ತಂದಿರುತ್ತಾರೆ. ಖಜಾಂಚಿಯವರ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಯಕಾರಿ ಸಮಿತಿಯು ಈ ಕುರಿತು ವಿಚಾರಣೆ ನಡೆಸಲು ಕೇಂದ್ರ ಸಂಘಕ್ಕೆ ಪತ್ರ ಬರೆಯುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿತು. ಅದೇ ಪ್ರಕಾರ ನಿರ್ಣಯ ಕೂಡ ದಾಖಲಾಯಿತು. ಆದರೆ ಕೇಂದ್ರ ಸಂಘಕ್ಕೆ ಪತ್ರ ಬರೆಯುವ ಸಂದರ್ಭದಲ್ಲಿ ಜಿಲ್ಲಾ ಸಂಘದಲ್ಲಿ ಪ್ರಕಾಶ್ ನಾಯಕ್ ಅವರ ಅವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರಾದ ಪಿ.ಕೆ. ಕೃಷ್ಣ ಪತ್ರ ಬರೆದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ. 


ಈತ ಬರೆದ ಪತ್ರದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೆ ವಿಚಾರಣೆಗೆ ಆದೇಶಿಸಿರುವುದು ಕೂಡ ನಿಯಮಾನುಸಾರ ಸರಿಯಾದ ಕ್ರಮವಲ್ಲ. ಏಕೆಂದರೆ ಯಾವ ವ್ಯಕ್ತಿಯ ಮೇಲೆ ನಾವು ಆರೋಪ ಮಾಡುತ್ತೇವೆಯೋ ಸದರಿ ಆರೋಪಗಳ ಬಗ್ಗೆ ಆತನಿಗೆ ಮೊದಲು ಸೂಚನಾ ಪತ್ರ ಕಳುಹಿಸಿ ಆತನಿಂದ ವಿವರಣೆ ಪಡೆದು ಸದರಿ ವಿವರಣೆ ಸಮಂಜಸ ಅಲ್ಲ ಎಂಬ ನಿಷ್ಕರ್ಷೆಗೆ ಬಂದರೆ ಮಾತ್ರ ವಿಚಾರಣೆ ನಡೆಸುವಂಥದ್ದು ನಿಯಮಾನುಸಾರ ಸರಿಯಾದ ಕ್ರಮವಾಗಿದೆ. ಆದರೆ ಸಂಘದಲ್ಲಿ ಅವ್ಯವಹಾರ ನಡೆದ ಬಗ್ಗೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರಿಗೆ ಜಿಲ್ಲಾ ಸಂಘದಿಂದ ಅಥವಾ ಕೇಂದ್ರ ಸಂಘದಿಂದ ವಿವರಣೆ ಕೋರಿ ಯಾವುದೇ ಸೂಚನಾ ಪತ್ರವನ್ನು ಕಳುಹಿಸಲಾಗಿಲ್ಲ. ಏಕಾಏಕಿ ಡಿ ಗ್ರೂಪ್ ನೌಕರ ಬರೆದ ಪತ್ರಕ್ಕೆ ಸ್ಪಂದಿಸಿ ವಿಚಾರಣೆಗೆ ಆದೇಶಿಸಿರುವುದು ಹಲವಾರು ಸಂದೇಹಗಳಿಗೆ ಕಾರಣವಾಗಿದೆ. 


ಕಾರ್ಯಕಾರಿ ಸಮಿತಿಯ ನಿರ್ಧಾರಕ್ಕೆ ವಿರುದ್ಧವಾಗಿ ಪ್ರಕಾಶ್ ನಾಯಕ್ ಅವರ ವಿರುದ್ಧ ವಿಚಾರಣೆ ನಡೆಸಬೇಕು ಎನ್ನುವ ಪತ್ರ ಬರೆದಿರುವುದು ಡಿ ಗ್ರೂಪ್ ನೌಕರರಾದ ಪಿ.ಕೆ. ಕೃಷ್ಣ ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾಡಿದ ತಂತ್ರವೆಂದು ಮೇಲ್ನೋಟಕ್ಕೆ ಕಂಡುಕೊಳ್ಳಬಹುದು. ತನ್ನ ಅವಧಿಯಲ್ಲಿ ನಡೆದ ಅವ್ಯವಹಾರಕ್ಕೆ ತಾನೇ ಕಾರಣ ಎಂಬುದನ್ನು ತಿಳಿದುಕೊಂಡು ಅದರಿಂದ ತಪ್ಪಿಸುವ ಸಲುವಾಗಿ ಪ್ರಕಾಶ್ ನಾಯಕ್ ಅವರ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಪತ್ರ ಬರೆದಿರುವುದು ಸ್ಪಷ್ಟವಾಗಿದೆ.


ಡಿ ಗ್ರೂಪ್ ನೌಕರ ಬರೆದ ಪತ್ರಕ್ಕೆ ಸ್ಪಂದಿಸಿ ಕೇಂದ್ರ ಸಂಘದಿಂದ ಶ್ರೀ ಮಲ್ಲಿಕಾರ್ಜುನ ಬಿ ಬಳ್ಳಾರಿ ಎಂಬವರು ಜಿಲ್ಲಾ ಸಂಘಕ್ಕೆ ಬಂದು ವಿಚಾರಣೆ ನಡೆಸಿರುತ್ತಾರೆ. ಶ್ರೀ ಪ್ರಕಾಶ್ ನಾಯಕ್ ಅವರು ವಿಚಾರಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಮಗ್ರ ಮಾಹಿತಿಯನ್ನು ಅವರಿಗೆ ಒದಗಿಸಿದ್ದಾರೆ. ಪ್ರಕಾಶ್ ನಾಯಕ್ ಅವರು ನೀಡಿದ ವರದಿಯನ್ನು ಜಿಲ್ಲೆಯ ಪ್ರಜ್ಞಾವಂತ ಸರಕಾರಿ ನೌಕರರ ಅವಗಾಹನೆಗೆ ಈ ಲೇಖನದ ಜೊತೆಗೆ ಕಳುಹಿಸಲಾಗಿದೆ.


ಪ್ರಕಾಶ್ ನಾಯಕ್ ಅವರು ನೀಡಿದ ವಿವರಣೆ ಹಾಗೂ ವರದಿಯನ್ನು ಓದಿದ ವಿಚಾರಣಾಧಿಕಾರಿಯವರಾದ ಶ್ರೀ ಮಲ್ಲಿಕಾರ್ಜುನ ಬಿ ಬಳ್ಳಾರಿ ಅವರು ಸದರಿ ವಿವರಣೆಯಲ್ಲಿರುವ ಸತ್ಯಾಂಶವನ್ನು ಮನಗಂಡು ಪ್ರಕಾಶ್ ನಾಯಕ್ ಅವರು ಯಾವುದೇ ಅವ್ಯವಹಾರ ನಡೆಸಿಲ್ಲ ಎಂಬುದಾಗಿ ಎಲ್ಲರ ಸಮಕ್ಷಮ ಘೋಷಿಸಿ ಅವರು ಜಿಲ್ಲಾ ಸಂಘಕ್ಕೆ ನೀಡಿದ ಕೊಡುಗೆಗಳನ್ನು ಎಲ್ಲರ ಎದುರು ಕೊಂಡಾಡಿರುತ್ತಾರೆ. ಸಂಘಕ್ಕೆ ಪ್ರಕಾಶ್ ನಾಯಕ್ ಅವರ ಸಲಹೆ, ಸೂಚನೆ, ಸಹಕಾರ ಅನಿವಾರ್ಯವಾಗಿದೆ ಎಂಬ ಮಾತುಗಳನ್ನು ಕೂಡ ಎಲ್ಲರ ಎದುರು ಆಡಿರುತ್ತಾರೆ. 


ವಿಚಾರಣಾಧಿಕಾರಿಯವರ ಮಾತಿನಿಂದ ಬಾಲಸುಟ್ಟ ಬೆಕ್ಕಿನಂತಾದ ಡಿ ಗ್ರೂಪ್ ನೌಕರ ಹಾಗೂ ಆತನ ಬೆಂಬಲಿಗ ಪದಾಧಿಕಾರಿಗಳು ಕೂಡ ಪ್ರಕಾಶ್ ನಾಯಕ್ ಅವರನ್ನು ಮುಕ್ತ ಕಂಠದಿಂದ ಹೊಗಳಿ ಜಿಲ್ಲಾ ಸಂಘದಲ್ಲಿ ನಡೆದಿರುವ ಅವ್ಯವಹಾರಕ್ಕೆ ಪ್ರಕಾಶ್ ನಾಯಕ್ ಅವರು ಕಾರಣರಲ್ಲ, ಬದಲಿಗೆ ಸಂಘದ ಗುಮಾಸ್ತೆ ಮಾಯಾ ಅವರೇ ಕಾರಣ ಎಂಬುದಾಗಿ ಎಲ್ಲರ ಸಮಕ್ಷಮ ನುಡಿದಿರುತ್ತಾರೆ. 


ಆದರೆ ವಾಸ್ತವ ಅಂಶವನ್ನು ಮಂಗಳೂರಿನ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಅವಾಗಾಹನಿಸಿ, ಸಂಘದ ಖಜಾಂಚಿಯಾಗಿದ್ದ ಶ್ರೀ ಅಕ್ಷಯ ಭಂಡಾರ್ಕರ್ ಅವರು ನೀಡಿದ ವರದಿಯನ್ನು ಉಲ್ಲೇಖಿಸಿ ಅವ್ಯವಹಾರ ಎಸಗಿದ ಪದಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಈ ವಿಷಯವನ್ನು ಪ್ರಕಾಶ್ ನಾಯಕ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟದ್ದೇ ಅವರ ವಿರುದ್ಧ ಈ ರೀತಿಯ ಕಪೋಲ ಕಲ್ಪಿತ ಆರೋಪ ಮಾಡಲು ಕಾರಣವಾಗಿದೆ.



ವ್ಯಕ್ತಿಗತ ವಿಚಾರಣೆಗಿಂತ ನ್ಯಾಯಾಲಯದ ವಿಚಾರಣೆ ಹೆಚ್ಚು ಮಹತ್ವವನ್ನು ಪಡೆದಿರುವುದರಿಂದ ಮಾನ್ಯ ನ್ಯಾಯಾಲಯವು ನಡೆಸಿದ ವಿಚಾರಣೆಯಲ್ಲಿ ಸಂಘದ ಪದಾಧಿಕಾರಿಗಳಾಗಿದ್ದ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರರಾದ ಶ್ರೀ ಪಿ.ಕೆ.ಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶ್ರೀ ಗಣೇಶ ರಾವ್ ಹಾಗೂ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಶ್ರೀ ನವೀನ್ ಕುಮಾರ್ ಎಂ.ಎಸ್. ಎಂಬವರು ತಪ್ಪಿತಸ್ಥರಾಗಿರುತ್ತಾರೆ. ಸಧ್ಯವೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.


ಪ್ರಕಾಶ್ ನಾಯಕ್ ವಿರುದ್ಧ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ಆ ಕುರಿತು ಪತ್ರಿಕಾ ಮಾಧ್ಯಮಗಳಿಗೆ ತಾನು ಸಂಘದ ಜಿಲ್ಲಾಧ್ಯಕ್ಷ ಸ್ಥಾನದಿಂದ ಅನರ್ಹಗೊಂಡರೂ ಜಿಲ್ಲಾಧ್ಯಕ್ಷನೆಂಬ ನೆಲೆಯಲ್ಲಿ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರರಾದ ಶ್ರೀ ಪಿ.ಕೆ. ಕೃಷ್ಣ ಅವರು ಹೇಳಿಕೆ ನೀಡಿರುತ್ತಾರೆ ಎಂಬ ವಿಷಯ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಡಿ ಗ್ರೂಪ್ ನೌಕರ ಪಿ.ಕೆ. ಕೃಷ್ಣ ಅವರ ಹೇಳಿಕೆಯ ಆಧಾರದಲ್ಲಿ ಪತ್ರಿಕೆಯಲ್ಲಿ ಪ್ರಕಾಶ್ ನಾಯಕ್ ಅವರ ವಿರುದ್ಧ ಮಾನಹಾನಿ ಕಾರಕ ವರದಿ ಪ್ರಕಟವಾದದ್ದೇ ಆದಲ್ಲಿ ಅದರಿಂದ ಉಂಟಾಗುವ ಸಕಲ ಕಷ್ಟ ನಷ್ಟಗಳಿಗೆ ಹಾಗೂ ಮಾನಹಾನಿ ಬರಹಕ್ಕೆ ಕಾನೂನು ಪ್ರಕಾರ ವಿಧಿಸಬಹುದಾದ ಶಿಕ್ಷೆಗೆ ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರಾದ ಶ್ರೀ ಪಿ.ಕೆ‌ ಕೃಷ್ಣ ಅವರು ಗುರಿಯಾಗಬೇಕಾಗುತ್ತದೆ. ಕ್ರಿಮಿನಲ್ ಪ್ರಕರಣವೇನಾದರೂ ದಾಖಲಾದಲ್ಲಿ ಈತನ ಸೇವಾ ಜೀವನಕ್ಕೆ ತೊಂದರೆಯಾಗುವುದರ ಜೊತೆಗೆ ಪಿಂಚಣಿಗೂ ಕುತ್ತು ಬರಬಹುದು.


ಚುನಾವಣೆಯ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಯಾವುದೇ ಆರೋಪ ಮಾಡುವುದರ ಮೊದಲು ಆರೋಪಗಳ ಬಗ್ಗೆ ಸೂಕ್ತ ಸಾಕ್ಷಿ, ಪುರಾವೆ, ದಾಖಲೆಗಳನ್ನು ಹೊಂದಿರಬೇಕು. ಪ್ರಕಾಶ್ ನಾಯಕ್ ಅವರು ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರ ಪಿ.ಕೆ.ಕೃಷ್ಣ ಅವರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೆ ಸೂಕ್ತ ಸಾಕ್ಷಿ, ಪುರಾವೆ ಹಾಗೂ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ ಪ್ರಕಾಶ್ ನಾಯಕ್ ಅವರ ವಿರುದ್ಧ ಮಾಡಿರುವ ಆರೋಪಗಳನ್ನು ಸಮರ್ಥಿಸುವ ಯಾವುದೇ ಸಾಕ್ಷಿ ಪುರಾವೆ ಹಾಗೂ ದಾಖಲೆಗಳನ್ನು ಉಲ್ಲೇಖಿಸಿಲ್ಲ. 


ಪ್ರಕಾಶ್ ನಾಯಕ್ ಅವರ ವಿರುದ್ಧ ಜಿಲ್ಲಾ ಸಂಘದ ಲೆಟರ್ ಹೆಡ್ ಬಳಸಿ ಕೇಂದ್ರ ಸಂಘಕ್ಕೆ ಕಾರ್ಯಕಾರಿ ಸಮಿತಿ ಕೈಕೊಂಡ ನಿರ್ಣಯಕ್ಕೆ ವಿರುದ್ಧವಾಗಿ ಪತ್ರ ಬರೆದು ಅದರ ಆಧಾರದಲ್ಲಿ ಪ್ರಕಾಶ್ ನಾಯಕ್ ಅವರ ವಿರುದ್ಧ ರಾಜ್ಯಾಧ್ಯಕ್ಷರು ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಪತ್ರಿಕಾ ಹೇಳಿಕೆ ಕೊಡುವುದು ಮಾನಹಾನಿಕರ ಪ್ರಕರಣವಾಗಿದೆ. 


"ವಿನಾಶ ಕಾಲಕ್ಕೆ ವಿಪರೀತ ಬುದ್ಧಿ" ಎಂಬುದು ಗ್ರಂಥಾಲಯ ಇಲಾಖೆಯ ಡಿ ಗ್ರೂಪ್ ನೌಕರ ಶ್ರೀ ಪಿ.ಕೆ. ಕೃಷ್ಣ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ. ಅದರ ಪರಿಣಾಮವನ್ನು ಅವರು ಖಂಡಿತವಾಗಿಯೂ ಅನುಭವಿಸುತ್ತಾರೆ ಎಂಬುದು ಪ್ರಾಜ್ಞರ ಮಾತು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99