ತಾಲೂಕಿಗೊಬ್ಬ ಕೆಎಎಸ್ ಅಧಿಕಾರಿ ನೇಮಕ: 'ಆಡಳಿತ ಉಸ್ರುವರಿ ಅಧಿಕಾರಿಯ ಅಧಿಕಾರವ್ಯಾಪ್ತಿ ಏನು..?
Tuesday, January 2, 2024
ತಾಲೂಕಿಗೊಬ್ಬ ಕೆಎಎಸ್ ಅಧಿಕಾರಿ ನೇಮಕ: 'ಆಡಳಿತ ಉಸ್ರುವರಿ ಅಧಿಕಾರಿಯ ಅಧಿಕಾರವ್ಯಾಪ್ತಿ ಏನು..?
ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಆಡಳಿತ ಉಸ್ತುವಾರಿ ಅಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಪರಿಣಾಮಕಾರಿ ಆಡಳಿತ, ಜನಪರ ಉದ್ದೇಶ ಮತ್ತು ಸಂವೇಧನಾ ಶೀಲ ಆಡಳಿತದ ಆಶಯದೊಂದಿಗೆ ಈ ಆದೇಶಹೊರಡಿಸಲಾಗಿದೆ.
ಆಡಳಿತ ಉಸ್ತುವರಿ ಅಧಿಕಾರಿಯ ಅಧಿಕಾರವ್ಯಪ್ತಿ ಏನು ಎಂಬುದು ರಾಜ್ಯ ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ತಾಲೂಕು ಮಟ್ಟದಲ್ಲಿ ಅವರ ಕರ್ತವ್ಯಗಳೇನು..?
ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು, ಜನಪರ ಯೋಜನೆಗಳ ಅನುಷ್ಠಾನ ಹಾಗೂ ಆಡಳಿತದ ಸಮಗ್ರ ಉಸ್ತುವಾರಿಯನ್ನು ಅವರು ವಹಿಸಲಿದ್ದಾರೆ. ಬಹುತೇಕ ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಈ ಹೊಣೆಯನ್ನು ನೀಡಲಾಗಿದೆ.
ನಿಯೋಜಿಕ ತಾಲೂಕಿನ ಎಲ್ಲ ಆಗುಹೋಗುಗಳಿಗೆ ಅವರೇ ಜವಾಬ್ದಾರಿಯನ್ನು ಹೊರುತ್ತಾರೆ. ಅವರಿಗೆ ನಿರ್ದಿಷ್ಟವಾಗಿ 13 ಟಾಸ್ಕ್‌ಗಳನ್ನು ನೀಡಲಾಗಿದೆ.