ಉಡುಪಿಗೆ ಹೆಚ್ಚುವರಿ ಎಸ್.ಪಿ. ಆಗಿ ಪರಮೇಶ್ವರ ಹೆಗಡೆ: ಕಿರು ಪರಿಚಯ
ಉಡುಪಿಗೆ ಹೆಚ್ಚುವರಿ ಎಸ್.ಪಿ. ಆಗಿ ಪರಮೇಶ್ವರ ಹೆಗಡೆ: ಕಿರು ಪರಿಚಯ
ಕರ್ನಾಟಕ ಸರಕಾರ ಎಲ್ಲ ಜಿಲ್ಲೆಗಳಿಗೂ ಎರಡನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಮಾಡಿದ್ದು, ಆ ಪ್ರಕಾರ ಹೊರಡಿಸಿದ ಆದೇಶದಂತೆ ಉಡುಪಿ ಜಿಲ್ಲೆಯ 2ನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ ಅನಂತ್ ಹೆಗಡೆ ಅವರು ನೇಮಕಗೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಹಾಗೂ ಸಾಮಾಜಿಕವಾಗಿ ಪಿ. ಎ. ಹೆಗಡೆ ಎಂದೇ ಪ್ರಖ್ಯಾತರಾಗಿರುವ ಪರಮೇಶ್ವರ ಅನಂತ್ ಹೆಗಡೆ ಅವರು ಇದಕ್ಕೂ ಮೊದಲು ಮಂಗಳೂರು ನಗರ ಅಪರಾಧ ವಿಭಾಗ- ಸಿಸಿಬಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸಬ್ ಇನ್ಸ್ ಪೆಕ್ಟರ್ ಆಗಿ 1994ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಅವರು, 2004ರಿಂದ 2006ರವರೆಗೆ ಮಂಗಳೂರು ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ, 2015ರಲ್ಲಿ ಸಿಸಿಬಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಆ ಬಳಿಕ ಅವರು ವಿಜಯ ನಗರ ಉಪವಿಭಾಗದ ಡ್ಯೂಟಿ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಸೇವಾವಧಿಯಲ್ಲಿ ಪಿ.ಎ. ಹೆಗಡೆ ಅವರು ಬಂಟ್ವಾಳದಲ್ಲಿ ಸಬ್ ಇನ್ಸ್ ಪೆಕ್ಟರ್ ಹಾಗೂ ಮೂಲ್ಕಿಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸೇವೆ ಸಲ್ಲಿಸಿದ್ದು, ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಣಿಕ ಖಡಕ್ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದಾರೆ.
ಮೊದಲನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಗಿರುವ ಎಸ್. ಟಿ. ಸಿದ್ದಲಿಂಗಪ್ಪ ಉಡುಪಿ ಜಿಲ್ಲೆಯ ಕಾನೂನು - ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
ಈಗ ನಿಯುಕ್ತಿಯಾಗಿರುವ ಪರಮೇಶ್ವರ ಅನಂತ್ ಹೆಗಡೆ ಅವರು ಅಪರಾಧ ಹಾಗೂ ಡಿಎಆರ್ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.