-->
ಮಂಗಳೂರಿಗೆ ಕಾದಿದೆ ಗಂಡಾಂತರ..! ಭಾರೀ ಅಪಾಯಕ್ಕೆ ಇದು ಕಾರಣವಂತೆ..!

ಮಂಗಳೂರಿಗೆ ಕಾದಿದೆ ಗಂಡಾಂತರ..! ಭಾರೀ ಅಪಾಯಕ್ಕೆ ಇದು ಕಾರಣವಂತೆ..!

ಮಂಗಳೂರಿಗೆ ಕಾದಿದೆ ಗಂಡಾಂತರ..! ಭಾರೀ ಅಪಾಯಕ್ಕೆ ಇದು ಕಾರಣವಂತೆ..!




ಕಡಲ ನಗರಿ ಮಂಗಳೂರಿಗೆ ಗಂಡಾಂತರ ಕಾದಿದೆ. ಇದು ಯಾವುದೋ ಟೆರರಿಸ್ಟ್ ದಾಳಿಯ ಭೀತಿಯಲ್ಲ...! ಅಥವಾ ನೆರೆ-ಪ್ರವಾಹ ಅಥವಾ ಭೂಕಂಪದಂತಹ ಪ್ರಾಕೃತಿಕ ವಿಕೋಪದ ಸುನಾಮಿ ಸುದ್ದಿಯಲ್ಲ.

ಆದರೂ, ಮಂಗಳೂರು ನಗರದ ಜನರು ಬೆಚ್ಚಿ ಬೀಳುವಂತಹ ಗಂಭೀರ ಸುದ್ದಿ ಇದು... ನಿಟ್ಟೆ ವಿಶ್ವವಿದ್ಯಾನಿಲಯದ ಸಹಕಾರದಲ್ಲಿ ನಡೆದ ಮರಗಳ ಎಣಿಕೆ ಅಭಿಯಾನದಲ್ಲಿ ಆತಂಕಕಾರಿ ಸತ್ಯವೊಂದು ಹೊರಬಿದ್ದಿದೆ. 

ಅದುವೇ... ನಗರದಲ್ಲಿ ಮರಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈಗ ಮರಗಳ ಪ್ರಮಾಣ ಶೇ. 6.24 ಮಾತ್ರ ಇರುವುದು. ಒಟ್ಟು 60 ವಾರ್ಡ್‌ ಪೈಕಿ 50 ವಾರ್ಡ್‌ಗಳ ಸರ್ವೇ ಕಾರ್ಯ ನಡೆದಿದ್ದು, ಖಾಸಗಿ ಪ್ರದೇಶದಲ್ಲಿ ಶೇ. 41ರಷ್ಟು ಶೇಕಡಾ ಮರಗಳಿವೆ. ಈ ಮರಗಳಿಗೂ ದೀರ್ಘಕಾಲದ ಉಳಿಗಾಲವಿಲ್ಲ. ಹಾಗೇನಾದರೂ ಆದಲ್ಲಿ, ಭವಿಷ್ಯದಲ್ಲಿ ಶೇ. 6ಕ್ಕಿಂತಲೂ ಕೆಳಕ್ಕಿಳಲಿದೆ.




ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ಮಂಗಳೂರು ನಗರದ ಹೃದಯ ಭಾಗದಲ್ಲಿ ಶೇ. 3ರಷ್ಟು ತಾಪಮಾನ ಏರಿಕೆಯಾಗಿದೆ. ತಿರುವೈಲು ಮತ್ತು ಬಜಾಲ್‌ನಂತಹ ಆಯ್ದ ಕೆಲವೇ ಕೆಲವೆಡೆ ತಾಪಮಾನ ಕೊಂಚ ಕಡಿಮೆ ಇದೆ.

ಇನ್ನು ಇದೇ ಪ್ರಮಾಣ ಮುಂದುವರಿದರೆ ಕಡಲ ನಗರಿ ಮಂಗಳೂರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಮನೆಗೊಂದು ಮರ, ವಾರ್ಡ್‌ಗೊಂದು ಪಾರ್ಕ್‌ ಎಂಬ ಘೋಷಣೆ ನಗರದಲ್ಲಿ ಮೊಳಗಬೇಕಿದೆ. ಹಸಿರು ಹೊದಿಕೆ ಹಾಸುವ ಮೂಲಕ ಮಂಗಳೂರಿನಲ್ಲಿ ಭೂಮಿ ತಾಯಿಯ ಮೈ ತಂಪುಮಾಡಬೇಕಿದೆ.

ಪ್ರಕೃತಿ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಹೊ ಯೋಜನೆಗಳನ್ನು ಜಾರಿಗೆ ತರಬೇಕಿದೆ.

Ads on article

Advertise in articles 1

advertising articles 2

Advertise under the article