
ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ: ನೌಕರರ ವೇತನದಲ್ಲಿ ಭಾರೀ ಹೆಚ್ಚಳ, ವಾರದಲ್ಲಿ ಐದು ದಿನದ ಪ್ರಸ್ತಾಪ!
ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ: ನೌಕರರ ವೇತನದಲ್ಲಿ ಭಾರೀ ಹೆಚ್ಚಳ, ವಾರದಲ್ಲಿ ಐದು ದಿನದ ಪ್ರಸ್ತಾಪ!
ದೇಶದಲ್ಲಿ ಇರುವ ವಿವಿಧ ಬ್ಯಾಂಕ್ ನೌಕರರಿಗೆ ಇದೊಂದು ಭಾರೀ ಸಿಹಿ ಸುದ್ದಿ. ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದ್ದು, ವಾರದಲ್ಲಿ ಐದು ದಿನದ ಪ್ರಸ್ತಾಪಕ್ಕೆ ಮತ್ತೆ ರೆಕ್ಕೆಪುಕ್ಕ ದೊರೆತಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ನೌಕರರ ವೇತನವು ಶೇ 17%ರಷ್ಟು ಏರಿಕೆಯಾಗಲಿದೆ.
ಭಾರತೀಯ ಬ್ಯಾಂಕ್‌ಗಳ ಸಂಘವು ಬ್ಯಾಂಕ್ ನೌಕರರ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ 2022ರ ನವೆಂಬರ್ ನಿಂದ ಪೂರ್ವಾನ್ವಯವಾಗುವಂತೆ ಶೇ 17%ರಷ್ಟು ಏರಿಕೆಯಾಗಲಿದೆ. ಇದರಿಂದಾಗಿ ಹೊಸ ವರ್ಷದ ಹೊಸ್ತಿಲಲ್ಲಿ ಇರುವಾಗಲೇ ಬ್ಯಾಂಕ್ ನೌಕರರಿಗೆ ಸಿಹಿ ಸುದ್ದಿ ದೊರೆತಂತಾಗಿದೆ. ಐದು ವರ್ಷಗಳ ಕಾಲ ಈ ಪರಿಷ್ಕೃತ ವೇತನ ಜಾರಿಯಲ್ಲಿ ಇರುತ್ತದೆ.
ಈ ವೇತನ ಹೆಚ್ಚಳದಿಂದಾಗಿ ಬ್ಯಾಂಕ್‌ಗಳಿಗೆ ವಾರ್ಷಿಕವಾಗಿ 12449 ಕೋಟಿ ರೂಪಾಯಿ ಹೊರೆ ಬೀಳಲಿದೆ.
ಇದೇ ವೇಳೆ, ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಪ್ರಸ್ತಾಪವೂ ಚರ್ಚೆಯಾಗಿದ್ದು, ಶೀಘ್ರದಲ್ಲೇ ಬ್ಯಾಂಕ್ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ದೊರೆಯಲಿದೆ.