
ಹೊಸ ವರ್ಷಕ್ಕೆ ಸಿಹಿ ಸುದ್ದಿ: ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ ಭಾರೀ ಇಳಿಕೆ, ಉಜ್ವಲ ಫಲಾನುಭವಿಗಳಿಗೆ ಸಂತಸ
ಹೊಸ ವರ್ಷಕ್ಕೆ ಸಿಹಿ ಸುದ್ದಿ: ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ ಭಾರೀ ಇಳಿಕೆ, ಉಜ್ವಲ ಫಲಾನುಭವಿಗಳಿಗೆ ಸಂತಸ
ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವವರಿಗೆ ಸಿಹಿ ಸುದ್ದಿ. ಅಡುಗೆ ಅನಿಲದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಭಾರೀ ಇಳಿಕೆ ಉಂಟಾಗಿದ್ದು, ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗೆ ಮುಂಚಿತವಾಗಿ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.
19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 39.50 ರೂ. ಇಳಿಕೆಯಾಗಿದೆ. ಹೊಸ ದರಗಳು ಡಿಸೆಂಬರ್ 22ರಂದು ಜಾರಿಗೆ ಬರಲಿದೆ. ದೆಹಲಿಯಲ್ಲಿ 19 KG ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಚಿಲ್ಲರೆ ಮಾರಾಟ ದರ ರೂ. 1757.50/- ಆಗಿದೆ. ರೂಪಾಯಿ ಆಗಿದೆ
ಗೃಹ ಬಳಕೆಯ LPG ಗ್ಯಾಸ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಎಲ್ಲರಿಗೂ ಗೊತ್ತಿರುವ ಹಾಗೆ, ವಾಣಿಜ್ಯ ಬಳಕೆಯ LPG ಗ್ಯಾಸ್ ಸಿಲಿಂಡರ್ ದರಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನದಂದು ಸಂಭವಿಸುತ್ತವೆ ಎಂಬುದು ಗಮನಾರ್ಹ.
ವಿವಿಧ ನಗರಗಳಲ್ಲಿ 19 KG ತೂಕದ ವಾಣಿಜ್ಯ ಸಿಲಿಂಡರ್ ಬೆಲೆಗಳು
ದೆಹಲಿಯಲ್ಲಿ ರೂ. 1757.50
ಕೋಲ್ಕತ್ತಾದಲ್ಲಿ ರೂ. 1868.50 ರೂ.,
ಮುಂಬೈನಲ್ಲಿ ರೂ. 1710 ರೂ.,
ಚೆನ್ನೈನಲ್ಲಿ ರೂ.1929 ರೂ.
ದೆಹಲಿಯಲ್ಲಿ ಗೃಹ ಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆ 820 ರೂ. ಆಗಿದೆ.
ಕೇಂದ್ರ ಸರ್ಕಾರದ 'ಉಜ್ವಲ' ಫಲಾನುಭವಿಗಳಿಗೆ ಸರ್ಕಾರವು ಪ್ರತಿ ಸಿಲಿಂಡರ್ ಗೆ LPG ಸಬ್ಸಿಡಿಯಲ್ಲಿ 300 ರೂ.ಗಳ ದರ ಕಡಿತ ಮಾಡಲಾಗಿದೆ. ಉಜ್ವಲ ಫಲಾನುಭವಿಗಳಗೆ ವರ್ಷಕ್ಕೆ 12 ರೀಫಿಲ್‌ಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ತೈಲ ಕಂಪೆನಿಗಳು ಗೃಹ ಬಳಕೆಯ LPG ಸಿಲಿಂಡರ್ ಗಳ ಬೆಲೆಯನ್ನು ರೂ. 200/- ದರ ಇಳಿಸಿ ಗ್ರಾಹಕರಿಗೆ ಸಂತಸ ನೀಡಿತ್ತು. ಆ ದಿನದಿಂದ ಗ್ಯಾಸ್ ಸಿಲಿಂಡರ್ ಬೆಲೆಗಳು ಬದಲಾಗಿಲ್ಲ.
ಅದೇ, ನವದೆಹಲಿಯಲ್ಲಿ ದೇಶೀಯ ದರ ಮತ್ತು ಗ್ಯಾಸ್ ಸಬ್ಡಿಡಿ ಮೂಲಕ ಸಿಲಿಂಡರ್ ನ ಈಗಿನ ಬೆಲೆ ರೂ. 903 ಆಗಿದೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿದೆ.