ಮಂಡ್ಯ ಕದನ ಕುತೂಹಲ: ಎಚ್‌ಡಿಕೆ Vs ಸುಮಲತಾ ಸ್ಪರ್ಧೆ? ಹೊಸ ರಾಜಕೀಯ ಸಮೀಕರಣ
ಮಂಡ್ಯ ಕದನ ಕುತೂಹಲ: ಎಚ್‌ಡಿಕೆ Vs ಸುಮಲತಾ ಸ್ಪರ್ಧೆ? ಹೊಸ ರಾಜಕೀಯ ಸಮೀಕರಣ
ರಾಜ್ಯ ರಾಜಕೀಯದ ಪ್ರಮುಖ ಆಖಾಡಗಳಲ್ಲಿ ಒಂದಾದ ಮಂಡ್ಯ ಲೋಕಸಭಾ ಚುನಾವಣೆಗೆ ಪ್ರಮುಖ ಪಕ್ಷಗಳ ತಯಾರಿ ಈಗಲೇ ಬಿರುಸುಕೊಂಡಿದೆ.
2024ರ ಲೋಕಸಭಾ ಚುನಾವಣೆಯು ಜಾತ್ಯತೀತ ಜನತಾದಳ(JDS)ಗೆ ಅಸ್ತಿತ್ವದ ಪ್ರಶ್ನೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಈ ಪ್ರತಿಷ್ಠಿತ ಕ್ಷೇತ್ರವನ್ನು ಮರಳಿ ದಕ್ಕಿಸಬೇಕಿದ್ದರೆ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕೆ ಧುಮುಕಬೇಕು ಎಂಬ ಚಿಂತನೆ ಬಲವಾಗಿದೆ.
ಇದರ ಜೊತೆಗೆ ಹಾಸನ, ತುಮಕೂರು, ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲು ಪಕ್ಷ ಭರದ ತಯಾರಿ ನಡೆಸಿದೆ.
ಈ ಮಧ್ಯೆ, ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ಧಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಾನೇನೂ ಹೇಳಲಾರೆ ಎಂದು ಹೇಳಿ ಮುಂಬರುವ ರಾಜಕೀಯ ಸಮೀಕರಣವನ್ನು ಸಸ್ಪೆನ್ಸ್‌ನಲ್ಲೇ ಇಟ್ಟಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ಕೂಡ ಕೈಕಟ್ಟಿ ಕೂತಿಲ್ಲ. ಎರಡು ಪಕ್ಷಗಳ ರಾಜಕೀಯ ನಡೆ ಮತ್ತು ಸುಮಲತಾ ಮನೋಇಚ್ಚೆ ಅರಿತು ಹೆಜ್ಜೆ ಇಡಲು ಕೈ ಪಾಳಯ ತಂತ್ರಗಾರಿಕೆ ಹೆಣೆಯುತ್ತಿದೆ. ಒಟ್ಟಿನಲ್ಲಿ ಹೊಸ ರಾಜಕೀಯ ಸಮೀಕರಣಕ್ಕೆ ವೇದಿಕೆಯಾಗುತ್ತಿದೆ.