ಗ್ಯಾರಂಟಿ ಲಾಭ ಬಿಜೆಪಿಯವರೂ ಪಡೀತಿಲ್ವಾ..?- ಸಿದ್ದರಾಮಯ್ಯ ವಾಗ್ದಾಳಿ, ಹಿಜಬ್ ಆದೇಶ ವಾಪಸ್!
ಗ್ಯಾರಂಟಿ ಲಾಭ ಬಿಜೆಪಿಯವರೂ ಪಡೀತಿಲ್ವಾ..?- ಸಿದ್ದರಾಮಯ್ಯ ವಾಗ್ದಾಳಿ, ಹಿಜಬ್ ಆದೇಶ ವಾಪಸ್!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಜೆಪಿಯವರೂ ಪಡೆಯುತ್ತಿಲ್ಲವೇ..? ನಮ್ಮ ಸರ್ಕಾರದ ಲಾಭ ಪಡೆದು ನಕ್ರಾ ಆಡುವವರ ಜೊತೆಗೆ ಹೋಗಬೇಡಿ. ನಿಮ್ಮ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.
ನಾವು ಎಲ್ಲ ಜಾತಿ, ಎಲ್ಲ ಧರ್ಮದವರಿಗೂ ಅನುಕೂಲವಾಗುವ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಅಷ್ಟೇ ಅಲ್ಲ, ಎಲ್ಲ ಪಕ್ಷದವರಿಗೂ ಇದರಿಂದ ಅನುಕೂಲವಾಗುತ್ತಿದೆ. ಬಿಜೆಪಿಯವರು 10 ಕಿ.ಲೋ. ಉಚಿತ ಅಕ್ಕಿ ಪಡೆಯುತ್ತಿಲ್ಲವೇ..? ಬಸ್‌ಗಳಲ್ಲಿ ಬಿಜೆಪಿಯವರು ಉಚಿತವಾಗಿ ಪ್ರಯಾಣಿಸುತ್ತಿಲ್ಲವೇ..? ಗೃಹಜ್ಯೋತಿ, ಗೃಹ ಲಕ್ಷ್ಮಿ ಯೋಜನೆಗಳ ಲಾಭವನ್ನು ಬಿಜೆಪಿಯವರು ಪಡೆಯುತ್ತಿಲ್ಲವೇ...? ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಧಾನಿ ಮೋದಿ ಸಬ್ ಕಾ ಸಾಥ್.. ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಅದು ಬೋಗಸ್ ಹೇಳಿಕೆ. ಬಟ್ಟೆ, ಉಡುಪಿ, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ 'ಹಿಜಬ್ ನಿಷೇಧ' ಆದೇಶವನ್ನು ವಾಪಸ್ ಪಡೆಯಲು ಹೇಳಿದ್ದೇವೆ ಎಂದು ಮಾಹಿತಿ ನೀಡಿದರು.
ಬಟ್ಟೆ ಹಾಕೋದು, ಊಟ ಮಾಡೋದು ಅವರವರಿಗೆ ಬಿಟ್ಟ ವಿಚಾರ. ಅದಕ್ಕೆ ನಾವು ಯಾಕೆ ಅಡ್ಡಿ ಪಡಿಸಬೇಕು. ನಾನು ಧೋತಿ, ಜುಬ್ಬಾ ತೊಡುತ್ತೇನೆ. ಇನ್ನು ಕೆಲವರು ಪ್ಯಾಂಟ್ ಶರ್ಟ್ ಹಾಕ್ತಾರೆ. ಅವರ ಇಷ್ಟ ಬಂದ ಬಟ್ಟೆ ಧರಿಸುತ್ತಾರೆ. ಅದರಲ್ಲಿ ತಪ್ಪೇನಿದೆ? ಹಾಗಾಗಿ ಎಂದು ಹಿಬಜ್ ನಿಷೇಧ ವಾಪಸ್ ಪಡೆದಿರುತ್ತೇನೆ ಎಂದು ಅವರು ತಿಳಿಸಿದರು.