-->
 ಈ ಹೂಡಿಕೆ ಮಾಡಿದ್ರೆ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುತ್ತೀರಿ... ನಿಮ್ಮ ಹೂಡಿಕೆಗೆ ಇಲ್ಲಿದೆ ಸೂಪರ್ ಚಾಯ್ಸ್‌!

ಈ ಹೂಡಿಕೆ ಮಾಡಿದ್ರೆ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುತ್ತೀರಿ... ನಿಮ್ಮ ಹೂಡಿಕೆಗೆ ಇಲ್ಲಿದೆ ಸೂಪರ್ ಚಾಯ್ಸ್‌!

 ಈ ಹೂಡಿಕೆ ಮಾಡಿದ್ರೆ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗುತ್ತೀರಿ... ನಿಮ್ಮ ಹೂಡಿಕೆಗೆ ಇಲ್ಲಿದೆ ಸೂಪರ್ ಚಾಯ್ಸ್‌!




ಸ್ಟಾಕ್ ಮಾರ್ಕೆಟ್‌: ಇಲ್ಲಿ ಹೂಡಿಕೆ ಮಾಡಲು ನಿಮಗೆ ಸೂಕ್ತ ಮಾರುಕಟ್ಟೆ ಜ್ಞಾನ ಹೊಂದಿರಬೇಕು. ಆಯ್ದ ಶೇರುಗಳ ಮೇಲೆ ನಿಯಮಿತವಾಗಿ ಹೂಡಿಕೆ ಮಾಡಿದರೆ ಶ್ರೀಮಂತರಾಗಲು ನೇರ ರಹದಾರಿ. ಉತ್ತಮ ಪೋರ್ಟ್‌ಫೋಲಿಯೋ ಮತ್ತು ಸೆಕ್ಟರ್‌ ಆಯ್ಕೆ ಮಾಡಿ. ಬಲಿಷ್ಟ ಕಂಪೆನಿ ಮೇಲೆ ಹೂಡಿಕೆ ಮಾಡಿ. ಡೈಲಿ ಟ್ರೇಡಿಂಗ್ ಬದಲು ಲಾಂಗ್‌ ಟರ್ಮ್‌ ಹೂಡಿಕೆಗೆ ಆದ್ಯತೆ ನೀಡಿ... ಹೋಂ ವರ್ಕ್‌ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ ಯಶಸ್ಸು ಖಚಿತ.


ಮ್ಯೂಚುವಲ್ ಫಂಡ್: ಉತ್ತಮ ಸಂಸ್ಥೆಗಳು ನಡೆಸುವ ಮ್ಯೂಚುವಲ್ ಫಂಡ್‌ಗಳು ನಿಮಗೆ ಉತ್ತಮ ಆದಾಯವನ್ನು ತಂದುಕೊಡಬಲ್ಲದು. ಸಿಪ್‌ ಹೂಡಿಕೆ ಸೇಫ್ ಮತ್ತು ಸುಸ್ಥಿರ ಆದಾಯಕ್ಕೆ ದಾರಿ. ಉತ್ತಮ ಪೋರ್ಟ್‌ಫೋಲಿಯೋ ಆಯ್ಕೆ ಮಾಡಿ. ಫಂಡ್ ನಡೆಸುವ ಕಂಪೆನಿಯನ್ನು ಮೊದಲು ಆಯ್ಕೆ ಮಾಡಿ. ಆ ಬಳಿಕ ಯಾವ ಸೆಕ್ಟರ್‌ನಲ್ಲಿ ಹೂಡಬೇಕು ಎಂಬುದನ್ನು ಆಯ್ಕೆ ಮಾಡಿ. ಇಂತಿಷ್ಟೇ ಪ್ರಮಾಣದಲ್ಲಿ ನಿಗದಿಪಡಿಸಿದ ಸೇವಿಂಗ್ಸ್‌ ಭವಿಷ್ಯದಲ್ಲಿ ನಿಮ್ಮ ಕೈಹಿಡಿಯುವುದು ಖಂಡಿತ.


ಪ್ರಾಪರ್ಟಿ ಮೇಲೆ ಹೂಡಿಕೆ: ರೀಯಲ್ ಎಸ್ಟೇಟ್‌ ಮೇಲೆ ಬುದ್ದಿವಂತಿಕೆಯಿಂದ ಹಣ ಹೂಡಿದರೆ ಅದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ರಿಟರ್ನ್‌ ಬರುವ ರೀತಿಯಲ್ಲಿ ನಿಮ್ಮ ಹೂಡಿಕೆಯನ್ನು ಪ್ಲ್ಯಾನ್ ಮಾಡಿಕೊಳ್ಳಿ.


ಬಂಗಾರದ ಮೇಲಿನ ಹೂಡಿಕೆ: ಚಿನ್ನದ ದರ ಸ್ಥಿರವಾದ ಏರುಗತಿಯನ್ನು ಹೊಂದಿದೆ. ಇದು ಅತ್ಯಂತ ಸೇಫ್‌ ಹಾಗೂ ತಕ್ಷಣ ಲಿಕ್ವಿಡೇಷನ್ ಮಾಡಬಹುದಾದ ಹೂಡಿಕೆ. ಆಪತ್ಕಾಲದಲ್ಲಿ ತಕ್ಷಣ ಮಾರಾಟ ಮಾಡಬಹುದು, ಇಲ್ಲವೇ ತಕ್ಷಣಕ್ಕೆ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಬಹುದು. ಚಿನ್ನದ ಮೇಲಿನ ಹೂಡಿಕೆ ರಿಸ್ಕ್‌ಲೆಸ್‌ ಮತ್ತು ಎನ್‌ಕ್ಯಾಶ್ ಮಾಡಬಹುದಾದ ಹೂಡಿಕೆ.


ಪಿಪಿಎಫ್‌: ಪಿಪಿಎಫ್‌ ಕೂಡ ಹೂಡಿಕೆಯಲ್ಲಿ ಉತ್ತಮ ಆಯ್ಕೆಗಳಲ್ಲಿ ಒಂದು.


ಫಿಕ್ಸೆಡ್ ಡೆಪಾಸಿಟ್ ಮತ್ತು ಸರ್ಕಾರಿ/ಕಾರ್ಪೊರೇಟ್ ಬಾಂಡ್‌ಗಳು- ನಿಗದಿತ ಆದಾಯ ಬಯಸುವವರಿಗೆ ಇದು ಉತ್ತಮ ಆಯ್ಕೆ. ರಿಸ್ಕ್ ಕಡಿಮೆ. ಸುಸ್ಥಿರ ಹಾಗೂ ಖಚಿತ ಪ್ರಮಾಣದ ಆದಾಯ. ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಬಂದು ಬೀಳುತ್ತದೆ.


ಎನ್‌ಪಿಎಸ್‌: ಸರ್ಕಾರಿ ಬೆಂಬಲಿತ ನಿವೃತ್ತಿ ಉಳಿತಾಯ ಯೋಜನೆ. ಸೂಕ್ತ ಮಾರ್ಗದರ್ಶನ ಹಾಗೂ ಸ್ಮಾರ್ಟ್ ಹೂಡಿಕೆಯ ಆಯ್ಕೆ ಮಾಡಿದ್ದಲ್ಲಿ ಇದೊಂದು ಉತ್ತಮ ಹೂಡಿಕೆ.


ಪೋಸ್ಟ್‌ ಆಫೀಸ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಗಳಲ್ಲಿ ಒಂದು...

Ads on article

Advertise in articles 1

advertising articles 2

Advertise under the article