
ಬೀಡಿ ಕಂಪೆನಿ ಮಾಲಕರ ನಿವಾಸ, ವರ್ಕ್‌ಶಾಪ್‌ಗೆ ಆದಾಯ ತೆರಿಗೆ ದಾಳಿ
Tuesday, October 10, 2023
ಬೀಡಿ ಕಂಪೆನಿ ಮಾಲಕರ ನಿವಾಸ, ವರ್ಕ್‌ಶಾಪ್‌ಗೆ ಆದಾಯ ತೆರಿಗೆ ದಾಳಿ
ಪುತ್ತೂರಿನ ಪೆರ್ನೆ ಎಂಬಲ್ಲಿ ಇರುವ ಅನಿತಾ ಬೀಡಿ ವರ್ಕ್ಸ್ ಮಾಲಕ ಮಹಮ್ಮದ್ ಅಲಿ ಆಲಿಯಾಸ್ ಮಮ್ಮುಕ್ಕ ಎಂಬವರ ನಿವಾಸಕ್ಕೆ ಐಟಿ ದಾಳಿ ನಡೆದಿದೆ.
ಮಮ್ಮುಕ್ಕ ಅವರ ಉಪ್ಪಿನಂಗಡಿ ಪೆರ್ನೆಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಇರುವ ಅಂಗಡಿ, ವರ್ಕ್ ಶಾಪ್ ಮತ್ತು ಮನೆಗೆ ಏಕಕಾಲಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐಟಿ ಅಧಿಕಾರಿಗಳು ಸುಮಾರು ಒಂದೆರಡು ಗಂಟೆಗಳ ಕಾಲ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಮಹಮ್ಮದ್ ಅಲಿ ಅವರು ಉದ್ಯಮಕ್ಕೆ ಸಂಬಂಧಿಸಿದ ಹಲವು ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದರು ಎನ್ನಲಾಗಿದೆ.