ದ.ಕ. ಜಿಲ್ಲಾ ಸರ್ಕಾರಿ ವಕೀಲರಾಗಿ ಮಂಗಳೂರಿನ ನವೀನ್ ಕುಮಾರ್ ಎಂ.ಜಿ. ನೇಮಕ
Sunday, October 8, 2023
ದ.ಕ. ಜಿಲ್ಲಾ ಸರ್ಕಾರಿ ವಕೀಲರಾಗಿ ಮಂಗಳೂರಿನ ನವೀನ್ ಕುಮಾರ್ ಎಂ.ಜಿ. ನೇಮಕ
ಮಂಗಳೂರಿನ ಪ್ರಖ್ಯಾತ ವಕೀಲರಾದ ನವೀನ್ ಕುಮಾರ್ ಎಂ.ಜಿ. ಅವರು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ.
ಈ ಹಿಂದೆ ನೇಮಕಗೊಂಡಿದ್ದ ವಕೀಲ ರಾಮಕೃಷ್ಣ ರೈ ಅವರಿಂದ ತೆರವಾದ ಹುದ್ದೆಗೆ ನವೀನ್ ಕುಮಾರ್ ಎಂ.ಜಿ. ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನವೀನ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸಲಿದ್ದಾರೆ.