ಮಹಿಳಾ ವಕೀಲರ ಜೊತೆ ಖಾಸಗಿ ಬಸ್ ನಿರ್ವಾಹಕ, ಡ್ರೈವರ್‌ನಿಂದ ಮಾನಹಾನಿ- ಖಾಸಗಿ ದೂರು ದಾಖಲಿಸಿದ ವಕೀಲರು
ಮಹಿಳಾ ವಕೀಲರ ಜೊತೆ ಖಾಸಗಿ ಬಸ್ ನಿರ್ವಾಹಕ, ಡ್ರೈವರ್‌ನಿಂದ ಮಾನಹಾನಿ- ಖಾಸಗಿ ದೂರು ದಾಖಲಿಸಿದ ವಕೀಲರು
ಕಡಲ ನಗರಿ ಮಂಗಳೂರಿನಲ್ಲಿ ಖಾಸಗಿ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಯುವ ಮಹಿಳಾ ವಕೀಲರ ಮೇಲೆ ಮಾನಹಾನಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ನಡೆದಿದೆ.
ಮಂಗಳೂರಿನ ಯುವ ಮಹಿಳಾ ವಕೀಲರಾದ ಕೆ. ಮುಫೀದಾ ರೆಹ್ಮಾನ್ ಅವರು ಬಸ್ಸಿಗಾಗಿ ಕಾಯುತ್ತಿದ್ದಾಗ ಬಂದ ಆಗಮಿಸಿದ ಬಸ್‌ನಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಈ ಅಕ್ರಮ ಮೆರೆದಿದ್ದಾರೆ ಎನ್ನಲಾಗಿದೆ.
ಮುಫಿದಾ ದೇರಳಕಟ್ಟೆಯ ಜಲಾಲ್‌ಬಾಗ್ ನಿವಾಸಿಯಾಗಿದ್ದು ಅಲ್ಲಿಗೆ ತೆರಳುವ ಬಸ್‌ಗಾಗಿ ಕಾಯುತ್ತಿದ್ದರು. ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುವ ಬಸ್ ಹತ್ತಲು ಪ್ರಯತ್ನಿಸಿದರು. ಆದರೆ, ಚಾಲಕನು ಅಜಾರೂಕತೆಯಿಂದ ಬಸ್‌ನ್ನು ಮುಂದಕ್ಕೆ ಚಲಾಯಿಸಿದ ಎಂದು ಮುಫಿದಾ ದೂರಿನಲ್ಲಿ ತಿಳಿಸಿದ್ದಾರೆ.
ವಕೀಲರೂ ಆಗಿರುವ ಮುಫಿದಾ ಬಸ್ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ ಎನ್ನಲಾಗಿದೆ. ಆಗ, ಬಸ್ಸಿನಿಂದ ಕೆಳಗೆ ಬೀಳುವ ಸಾಧ್ಯತೆ ಇದ್ದ ಕಾರಣ ತಾನು ಬೊಬ್ಬೆ ಹಾಕಿದ್ದು, ಆದರೂ ಬಸ್‌ನ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ ಎಂದು ವಕೀಲರಾದ ಮುಫೀದಾ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಘಟನೆ ವೇಳೆ ಮಹಿಳಾ ವಕೀಲರ ಕೈ ಹಿಡಿದ ಬಸ್ ಕಂಡೆಕ್ಟರ್ 'ನಿಮಗೆ ಬೇಗ ಬಸ್ ಹತ್ತಲು ಆಗುವುದಿಲ್ಲವಾ?... ಬಿದ್ದು ಸಾಯುತ್ತೀಯಾ?... ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಈ ಬಗ್ಗೆ ವಕೀಲೆ ಮುಫಿದಾ ಪ್ರತಿರೋಧ ತೋರಿದಾಗ 'ಮುಸಲ್ಮಾನ ಹೆಂಗಸರಿಗೆ ತುಂಬಾ ಅಹಂಕಾರ ಇದೆ. ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು. ಇಲ್ಲವಾದರೆ ಕೆಳಗೆ ಇಳಿಯಬೇಕು’ ಎಂದು ಬಸ್ ಕಂಡೆಕ್ಟರ್ ವಕೀಲರ ಮಾನಹಾನಿ ಮಾಡಿದ್ದಾರೆ. ಅಲ್ಲದೆ, ವಕೀಲರು ಬಸ್‌ನಿಂದ ಇಳಿಯುವವರೆಗೆ ಅವಾಚ್ಯ ಹಾಗೂ ಕೆಟ್ಟ ಶಬ್ದಗಳಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿದ್ದಾರೆ ಎಂದು ವಕೀಲರು ತಾವು ದಾಖಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ವಕೀಲರು ತಮ್ಮ ಮೊಬೈಲ್ ಬಳಸಿ ಆತನ ಫೋಟೋ ತೆಗೆಯುವಾಗ "ನಿನಗೆ ಏನು ಮಾಡಲು ಸಾಧ್ಯವಿದೆ? ಮೊದಲು ಅದನ್ನು ಮಾಡು" ಎಂದು ಮಾನಹಾನಿ ಮಾಡಿದ್ದಾನೆ. ತಾವು ಬಸ್ಸನ್ನು ಹತ್ತುವಾಗ ಕೆಳಗೆ ಬೀಳುವಂತಾದರೂ ನಿಲ್ಲಿಸದ ಚಾಲಕನ ಹಾಗೂ ಬಸ್ಸಿನಲ್ಲಿ ಉಡಾಫೆಯಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ ಕಂಡೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮಂಗಳೂರಿನ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.