
ಅಕ್ಟೋಬರ್‌ನಿಂದ ಅನ್ಯಭಾಗ್ಯ ಅಕ್ಕಿ: ಪ್ರತಿ ಅರ್ಹ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ
Friday, September 29, 2023
ಅಕ್ಟೋಬರ್‌ನಿಂದ ಅನ್ಯಭಾಗ್ಯ ಅಕ್ಕಿ: ಪ್ರತಿ ಅರ್ಹ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ
ರಾಜ್ಯದಲ್ಲಿ ಅಕ್ಟೋಬರ್‌ನಿಂದ ಅನ್ನಭಾಗ್ಯ ಯೋಜನೆ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.
ಅರ್ಹ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿಯನ್ನು ಹಂಚಿಕೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿತ್ತು. ಆದರೆ, ಸಕಾಲದಲ್ಲಿ ಕೇಂದ್ರದಿಂದ ಅಕ್ಕಿ ಪೂರೈಕೆಯಾಗದೇ ಇದ್ದ ಹಿನ್ನೆಲೆಯಲ್ಲಿ ಈ ಯೋಜನೆಗೆ ಅಡ್ಡಿ ಉಂಟಾಗಿತ್ತು.
ಈ ಕಾರಣದಿಂದ ಸದ್ಯ 5 ಕೆ.ಜಿ. ಅಕ್ಕಿ ಹಾಗೂ ಉಳಿದ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗಿತ್ತು. ಆದರೆ, ಈಗ ಅಕ್ಕಿ ಖರೀದಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಅನ್ನಭಾಗ್ಯದ ಲಾಭ ಎಲ್ಲ ಫಲಾನುಭವಿ ಕುಟುಂಬಕ್ಕೆ ಒದಗಿಬರಲಿದೆ ಎಂದು ಸಚಿವರು ಹೇಳಿದರು.