ಸಂಗಾತಿ ಜೊತೆ ಅಸಹಜ ಸೆಕ್ಸ್, ಮತಾಂತರಕ್ಕೆ ಒತ್ತಾಯ: ಕಿರಾತಕ ಆರೋಪಿ ಅರೆಸ್ಟ್
ಸಂಗಾತಿ ಜೊತೆ ಅಸಹಜ ಸೆಕ್ಸ್, ಮತಾಂತರಕ್ಕೆ ಒತ್ತಾಯ: ಕಿರಾತಕ ಆರೋಪಿ ಅರೆಸ್ಟ್
ಲಿವ್ ಇನ್ ರಿಲೇಶನ್‌ನಲ್ಲಿ ಇದ್ದ ತನ್ನ ಟೆಕ್ಕಿ ಸಂಗಾತಿ ಜೊತೆಗೆ ಅಸಹಜ ಲೈಂಗಿಕ ಸಂಪರ್ಕ ಮತ್ತು ಬಲವಂತವಾಗಿ ತನ್ನ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಡ ಹಾಕುತ್ತಿದ್ದ ಆರೋಪಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
32 ವರ್ಷದ ಮೊಗಿಲ್ ಅಶ್ರಫ್ ಬೇಗ್ ಬಂಧಿತ ಆರೋಪಿ. ಈತ ಬೆಂಗಳೂರು ಮೂಲದ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2018ರಿಂದ ಸಂತ್ರಸ್ತೆ ಜೊತೆಗೆ ಪರಿಚಯದಲ್ಲಿ ಇದ್ದ ಈತ ಆಕೆಯ ಜೊತೆಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಪರಸ್ಪರ ಮದುವೆಯಾಗಲೂ ಈ ಜೋಡಿ ನಿರ್ಧಾರ ಮಾಡಿಕೊಂಡಿದ್ದರು.
ಆದರೆ, ಅಶ್ರಫ್ ಬೇಗ್ ಆಕೆಯನ್ನು ತನ್ನ ಧರ್ಮಕ್ಕೆ ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ. ಇಷ್ಟ ಇಲ್ಲದಿದ್ದರೂ ಮದುವೆ ಆಗುವುದಾಗಿ ನಂಬಿಸಿ ಹಲವು ಬಾರಿ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಅಲ್ಲದೆ, ತನ್ನ ಜೊತೆಗೆ ಅಸಹಜ ಲೈಂಗಿಕ ಕ್ರಿಯೆಯನ್ನು ಮಾಡಬೇಕು ಎಂದು ಬಲವಂತವಾಗಿ ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.