UDUPI ; ಮದ್ಯಪ್ರೀಯರಿಗೆ ಸನ್ಮಾನ..! ಯಾಕೆ ಗೊತ್ತಾ?
Tuesday, July 11, 2023
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಉಚಿತ ಯೋಜನೆಗಳು ಗಮನ ಸೆಳೆಯಿತು. ಆದ್ರೆ ಬಜೆಟ್‌ನಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಸರ್ಕಾರ ಹೆಚ್ಚಿಸಿತು. ಮದ್ಯದ ಮೇಲಿನ ತೆರಿಗೆ ವಿರೋಧಿಸಿ, ಉಚಿತ ಮದ್ಯ ನೀಡುವಂತೆ ಸರಕಾರವನ್ನು ಆಗ್ರಹಿಸಿ ಉಡುಪಿಯಲ್ಲಿ ಕೂಲಿ ಕಾರ್ಮಿಕರ ಪ್ರತಿಭಟನೆ ನಡೆಯಿತು.
ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ವಿನೂತನ ರೀತಿಯಲ್ಲಿ, ಕೂಲಿ ಕಾರ್ಮಿಕರು, ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು. ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ ಇಲ್ಲದಿದ್ದಲ್ಲಕ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ ಇಲ್ಲದಿದ್ದಲ್ಲಿ ಸಾರಾಯಿ ಯನ್ನು ಬಂದ್ ಮಾಡಿ, ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನಿಡುತ್ತೇವೆ ಅಂತ ಆಗ್ರಹಿಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆದಿದೆ.