UDUPI ; ನಾಯಿಯನ್ನು ನುಂಗಿದ ಹೆಬ್ಬಾವು..!
Tuesday, July 11, 2023
ನಾಯಿಯನ್ನು ನುಂಗಿ ಚಲಿಸಲಾಗದೇ ಹಾಗೆ ಮಲಗಿಕೊಂಡಿದ್ದ ಹೆಬ್ಬಾವನ್ನು ಕೊನೆಗೆ ಊರವರು ಸೇರಿ ಹೆಬ್ಬಾವಿನ ಬಾಲ ಹಿಡಿದು ಎಳೆಯುವ ಮೂಲಕ ನಾಯಿಯನ್ನ ಹೆಬ್ಬಾವಿನ ಹೊಟ್ಟೆಯದ ಹೊರ ಹಾಕಿಸಿದ್ದಾರೆ.
ಉಡುಪಿ ಉಪ್ಪುಂದದಲ್ಲಿ ನಡೆದ ಘಟನೆ ಎನ್ನಲಾಗಿದ್ದು, ಹೆಬ್ಬಾವು ಚಲಿಸಲು ಕಷ್ಟ ಪಟ್ಟು ಹಾಗೆ ಮಲಗಿತ್ತು. ಊವರಿಗೂ ಹೆಬ್ಬಾವು ಎನನ್ನು ತಿಂದಿದೆ ಅನ್ನೋದು ಗೊತ್ತಾಗಿರಲಿಲ್ಲ. ಕೊನೆಗೆ ಅಲ್ಲಿದ್ದ ಯುವಕರು, ಹೆಬ್ಬಾವಿನ ಬಾಲಹಿಡಿದು ಎಳೆದು ನಾಯಿಯನ್ನು ಹೆಬ್ಬಾವಿನ ಹೊಟ್ಟೆಯಿಂದ ಹೊರ ಹಾಕಿಸಿದ್ದಾರೆ. ಈ ವಿಡಿಯೋದಲ್ಲಿ ಕುಂದಾಪುರ ಕನ್ನಡ ಮಾತನಾಡುತ್ತಿದ್ದು, ಬೈಂದೂರು ತಾಲೂಕಿನ ಉಪ್ಪುಂದ ವಿಡಿಯೋ ಎಂದು ಸದ್ಯ ಬಾರೀ ವೈರಲ್ ಆಗುತ್ತಿದೆ.