UDUPI : ಉಡುಪಿಯ ಕುರುಡುಂಜೆಯಲ್ಲಿ ಕೊರಗಜ್ಜನ ಪವಾಡ..!
Wednesday, July 12, 2023
ಕರಾವಳಿಗರ ಆರಾಧ್ಯ ದೈವ ಕೊರಗಜ್ಜನ ಪವಾಡದ ಸುದ್ದಿ ಅನೇಕ ಸಲ ಕೇಳಿರಬಹುದು.ಇದೀಗ ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ಭಕ್ತರನ್ನು ಅಚ್ಚರಿ ಮೂಡಿಸಿದೆ. ಉಡುಪಿಯ ಬ್ರಹ್ಮಾವರ ಸಮೀಪದ ಕುರುಡುಂಜೆಯಲ್ಲಿ ಕೊರಗಜ್ಜ ಪವಾಡ ಬೆಳಕಿಗೆ ಬಂದಿದ್ದು,
ಪವಾಡದಿಂದ ಕಳೆದುಹೋದ ಕೆಲವೇ ಹೊತ್ತಿನಲ್ಲಿ ಹಣ ಮರಳಿ ದೊರೆತ ಘಟನೆ ನಡೆದಿದೆ ಕುರುಡುಂಜೆಯ ಗದ್ದೆಯಲ್ಲಿ ಉಳುಮೆ ಮಾಡಲು ಬಂದಿದ್ದ ಶಿವಮೊಗ್ಗದ ಗಣೇಶ್ ಎಂಬುವವರು ಬಂದಿದ್ದರು. ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪಾದಿಸಿದ ಹಣ ಪ್ಲಾಸ್ಟಿಕ್ ತೊಟ್ಟೆಯಲ್ಲಿತ್ತು.
ಟ್ರ್ಯಾಕ್ಟರ್ ನಲ್ಲೆ ಹಣದ ಕಟ್ಟು ಇಟ್ಟುಕೊಂಡು ಉಳುಮೆ ಮಾಡುತ್ತಿದ್ದರು. ಕೆಲಸ ಮುಗಿಸಿದ ನಂತರ ನೋಡುವಾಗ ಹಣ ಕಳೆದು ಹೋಗಿತ್ತು. ಗದ್ದೆಯಲ್ಲಿ ಎಷ್ಟೇ ಹುಡುಕಿದರೂ ಹಣ ಸಿಗಲಿಲ್ಲ. ಸ್ಥಳೀಯ ಮಹೇಶ್ ಶೆಟ್ಟಿ ಅವರ ಸಲಹೆ ಮೇರೆಗೆ ಗಣೇಶ್ , ಹಣ ಮರಳಿ ದೊರೆತರೆ, ಕಳ್ಳು, ಬೀಡ , ಚಕ್ಕುಲಿಯೊಂದಿಗೆ ದೊರಕಿದ ಹಣದಲ್ಲಿ ಒಂದು ಸಾವಿರ ಕಾಣಿಕೆ ಹಾಕುವುದಾಗಿ ಕೊರಗಜ್ಜನಿಗೆ ಹರಕೆ ಹೊರುತ್ತಾರೆ.
ಬಳಿಕ ಗದ್ದೆಯಲ್ಲಿ ಹುಡುಕಿದಾಗ ಕಳೆದು ಹೋಗಿದ್ದ 25,000 ಹಣದ ಕಟ್ಟು ಹುಡುಕಿದ ಸ್ಥಳದಲ್ಲಿ ಮತ್ತೆ ಪತ್ತೆಯಾಗಿದೆ.ಇದು ಕೊರಗಜ್ಜನ ಪವಾಡ ಎನ್ನುತ್ತಿದ್ದಾರೆ ಸ್ಥಳೀಯರು..