UDUPI ; ಅಪಘಾತವಾಗಿ ಬಂಪರ್‌ನಲ್ಲಿ ಸಿಲುಕಿದ ಕಾರನ್ನು ಎಳೆದೊಯ್ದ ಟಿಪ್ಪರ್
Tuesday, July 18, 2023
ಟಿಪ್ಪರ್‌ಗೆ ಕಾರು ಹಿಂದಿನಿಂದ ಢಿಕ್ಕಿ ಹೊಡೆದು, ಢಿಕ್ಕಿಯ ರಬಸಕ್ಕೆ ಕಾರು ಟಿಪ್ಪರ್‌ನ ಬಂಪರ್‌ನಲ್ಲಿ ಸಿಲುಕಿಕೊಂಡಿತ್ತು. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ, ಟಿಪ್ಪರ್‌ಗೆ ಸಿಲುಕಿಕೊಂಡ ಕಾರನ್ನು ಹಾಗೆ ಎಳೆದೊಯ್ದ ಘಟನೆ ಉಡುಪಿಯ ಹೆಜಮಾಡಿಯ ಕನ್ನಂಗಾರು ಬೈಪಾಸ್ ಬಳಿ ನಡೆದಿವೆ.
ಉಡುಪಿ ಕಡೆಯಿಂದ ಸಾಗುತ್ತಿದ್ದ ಕಾರು ಟಿಪ್ಪರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಟಿಪ್ಪರ್‌ನ ಹಿಂಭಾಗ ಸಿಲುಕಿಕೊಂಡಿತ್ತು, ಇದು ಟಿಪ್ಪರ್ ಚಾಲಕನ ಗಮನಕ್ಕೆ ಬಾರದೇ, ಸುಮಾರು ಒಂದು ಕಿಲೋಮೀಟರ್ ದೂರದ ವರೆಗೂ ಟಿಪ್ಪರ್ ಕಾರನ್ನು ಎಳೆದುಕೊಂಡು ಹೋಗಿತ್ತು. ಈ ವೇಳೆ ಹಿಂಬದಿಯಿಂದ ಕಾರಿನಲ್ಲಿ ಇದ್ದವರು ಹೆಜಮಾಡಿ ಟೋಲ್ ಗೇಟ್ ಬಳಿ ಟಿಪ್ಪರನ್ನು ನಿಲ್ಲಿಸಿದ್ದಾರೆ.
ಕಾರಿನಲ್ಲಿದ್ದ ಸಾಗರ ಮೂಲದ ಜಾಫರ್ ಖಾನ್, ಶಾಹಿನ, ಯಾಸಿರ್ ಖಾನ್ ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರೂ ಸಾಗರದಿಂದ ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕಾರು ಮತ್ತು ಟಿಪ್ಪರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಘಟನೆ ವಿಡಿಯೋ ಬಾರೀ ವೈರಲ್ ಆಗಿದೆ