UDUPI ; ಯುವತಿಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಯುವಕನೂ ಆತ್ಮಹತ್ಯೆ
Friday, July 21, 2023
ಯುವತಿಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿದ್ದ ಯುವಕನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ಈದು ಗ್ರಾಮದ ಸಂತೋಷ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಾರ್ಕಳದ ಬ್ಯಾಂಕ್‌ವೊಂದರಲ್ಲಿ ಸಹಾಯಕಿಯಾಗಿದ್ದ ಪ್ರಮೀಳಾ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಮೀಳಾರ ಆತ್ಮಹತ್ಯೆಗೆ ಅವರ ಪತಿ ನರೇಶ ಅವರ ದೂರದ ಸಂಬಂಧಿಕ ಸಂತೋಷ್ ದೇವಾಡಿಗ ಕುಮ್ಮಕ್ಕು ಕಾರಣ, ಆತ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಪ್ರಮೀಳಾ ಅವರ ಸಹೋದರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಸಂತೋಷ್ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿತ್ತು. ಆ ತಲೆಮರೆಸಿಕೊಂಡಿದ್ದ, ಸಂತೋಷ್ ಕಾರ್ಕಳದ ಈದುವಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.