UDUPI : ಯದ್ವಾತದ್ವಾ ಬಸ್ ಓಡಿಸಿ, ಸರ್ಕಾರಿ ಬಸ್‌ಗೆ ಗುದ್ದಿದ ಖಾಸಗಿ ಬಸ್.!
Wednesday, July 19, 2023
ಯದ್ವಾತದ್ವಾ ಬಸ್ ಓಡಿಸುವ ಬರದಲ್ಲಿ ಸರ್ಕಾರಿ ಬಸ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಡೆದಿದೆ.
ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿತ್ತು. ಈ ವೇಳೆ ಅತೀ ವೇಗದಲ್ಲಿ ಬಂದ, ಖಾಸಗಿ ಬಸ್ ಸರ್ಕಾರಿ ಬಸ್‌ನ್ನು ಓವರ್ ಟೆಕ್ ಮಾಡುವ ಬರದಲ್ಲಿ ಸರ್ಕಾರಿ ಬಸ್‌ನ ಒಂದು ಬದಿಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ
ಸರ್ಕಾರಿ ಬಸ್ಸಿನ ಗಾಜು ಹುಡಿಯಾಗಿದ್ದು, ವಿಂಡೋ ಸಿಟ್‌ನಲ್ಲಿ ಕುಳಿತ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವೇಳೆ ನಮ್ಗೆ ಟೈಮ್ ಇಲ್ಲ ಹಾಗಾಗಿ ಬಸ್ ಓಡಿಸಿದೆ ಅಂತ ಉಡಾಪೆ ಖಾಸಗಿ ಬಸ್ ಡ್ರೈವರ್ ಉಡಾಫೆ ಉತ್ತರ ನೀಡಿದ್ದು, ಇದರಿಂದ ಕೋಪಗೊಂಡ ಸರ್ಕಾರಿ ಬಸ್ ಪ್ರಯಾಣಿಕರು, ಡ್ರೈವರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.